ಸೋಲ್, ಜನವರಿ 09 (www.justkannada.in): 2018ರ ಚಳಿಗಾಲದ ಒಲಿಂಪಿಕ್ಸ್’ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಇದ್ದು ದಾಖಲೆ ಪ್ರಮಾಣದಲ್ಲಿ ಕಾಂಡೊಮ್ ಹಂಚಲು ಆಯೋಜಕರು ಸಿದ್ಧತೆ ನಡೆಸಿದ್ದಾರೆ.

ಎಚ್ಐವಿ ಸೋಂಕು ತಡೆಗಟ್ಟಲು ಆಯೋಜಕರು ಈ ಕ್ರಮಕ್ಕೆ ಮುಂದಾಗಿದ್ದು ಈ ವರ್ಷ 1,10,000 ಕಾಂಡೋಮ್ ಗಳನ್ನು ಹಂಚವುದಾಗಿ ಘೋಷಿಸಿದ್ದಾರೆ. ಕಳೆದ ಆವೃತ್ತಿಗಿಂತ ಈ ವರ್ಷ ಹೆಚ್ಚುವರಿಯಾಗಿ 10 ಸಾವಿರ ಕಾಂಡೋಮ್ ವಿತರಿಸಲಾಗುತ್ತಿದೆ.

ಚಳಿಗಾಲದ ಒಲಿಂಪಿಕ್ಸ್ ನಲ್ಲಿ 2925 ಅಥ್ಲೀಟ್ ಗಳು ಪಾಲ್ಗೋಳ್ಳುತ್ತಿದ್ದು ಒಬ್ಬ ಅಥ್ಲೀಟ್ ಗೆ 37 ಕಾಂಡೋಮ್ ಗಳು ದೊರೆಯಲಿವೆ.
ಪೈಯೋಂಗ್ ಚಾಂಗ್ ಕ್ರೀಡಾಕೂಟದ ಆಥಿತ್ಯ ವಹಿಸುತ್ತಿದ್ದು ಗ್ಯಾಂಗ್ ನ್ಯುಯಂಗ್ ನ ಕ್ರೀಡಾ ಗ್ರಾಮದ ಟಾಯ್ಲೆಟ್ ಗಳಲ್ಲಿ ಕಾಂಡೋಮ್ ಗಳನ್ನು ಇರಿಸಲಾಗಿದೆ.