ಸಿಎಂ ಪ್ರವಾಸದಲ್ಲಿ ಅಹಿತಕರ ಘಟನೆ ನಡೆದ್ರೆ ಯಾರು ಹೊಣೆ; ಮಂಡ್ಯ ಎಸ್ ಪಿಯನ್ನ ಸಿಎಂ ತರಾಟೆ ತೆಗೆದುಕೊಂಡ ಕ್ರಮ ಸಮರ್ಥಿಸಿಕೊಂಡ ಪರಂ……

0
567
Who -responsible -uncomfortable -incident –g.parameshwar

ಚಿಕ್ಕಮಗಳೂರು,ಏ,21,2017(www.justkannada.in):  ನಿನ್ನೆ ಮಂಡ್ಯ ಎಸ್ ಪಿ ಅವರನ್ನ ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡ ಕ್ರಮವನ್ನ ಸಮರ್ಥಿಸಿಕೊಂಡಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ಸಿಎಂ ಪ್ರವಾಸದಲ್ಲಿ ಅಹಿತಕರ ಘಟನೆ ನಡೆದರೇ ಯಾರು ಹೊಣೆ ಎಂದು ಪ್ರಶ್ನಿಸಿದರು.Who -responsible -uncomfortable -incident –g.parameshwar

ನಿನ್ನೆ ಸಿಎಂ ಸಿದ್ದರಾಮಯ್ಯ ಮಂಡ್ಯ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಮಳವಳ್ಳಿ ಬಸ್ ನಿಲ್ದಾಣದ ಬಳಿ ಬಿಜೆಪಿ ಕಾರ್ಯಕರ್ತರು  ಸಿಎಂ ಸಿದ್ದರಾಮಯ್ಯ ಅವರ ಕಾರು ತಡೆದು  ಕಪ್ಪುಪಟ್ಟಿ ಧರಸಿ ಪ್ರತಿಭಟನೆ ನಡೆಸಿದ್ದರು.ಇದರಿಂದ ಗರಂ ಆದ ಸಿಎಂ ಸಿದ್ದರಾಮಯ್ಯ, ಮಂಡ್ಯ ಎಸ್ ಪಿಯನ್ನ ವೇದಿಕೆಗೆ ಕರೆದು ತರಾಟೆಗೆ ತೆಗೆದುಕೊಂಡಿದ್ದರು.

ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ಕ್ರಮವನ್ನ ಬೆಂಬಲಿಸಿ ಇಂದು ಚಿಕ್ಕಮಗಳೂರಿನ  ಕರಗಡ ಗ್ರಾಮದಲ್ಲಿ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್   ಅಕಸ್ಮಾತ್ ಸಿಎಂ ಕಾರಿಗೆ ಕಲ್ಲು ಹೊಡೆದಿದ್ರೆ ಏನು ಮಾಡೋದು. ಈ ಕುರಿತು  ಎಸ್ಪಿ ಜತೆ ಮಾತನಾಡಿ ವರದಿ ನೀಡುವಂತೆ  ಸೂಚನೆ ನೀಡಿದ್ದೇನೆ ಎಂದರು.

 ಉಪಚುನಾವಣೆಯಲ್ಲಿ ಸೋತ್ರೂ 150 ಸೀಟ್ ಗೆಲ್ತೀನಿ ಅಂತಾರೆ- ಪರಂ ವ್ಯಂಗ್ಯ…

ಇದೇ ವೇಳೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಸಚಿವ ಪರಮೇಶ್ವರ್  ಉಪಚುನಾವಣೆಯನ್ನ ಬಿಎಸ್ ಯಡಿಯೂರಪ್ಪ  ಸೆಮಿ ಫೈನಲ್ ಎಂದಿದ್ದರು. ಈ ಸೆಮಿ ಫೈನಲ್ ನಲ್ಲಿ ಸೋತರೂ ಮುಂದಿನ ಚುನಾವಣೆಯಲ್ಲಿ 150 ಸೀಟ್ ಗೆಲ್ತೇವೆ ಎಂದು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.

Key words: Who -responsible -uncomfortable -incident –g.parameshwar