ಬೆಂಗಳೂರು, ಫೆಬ್ರವರಿ 10 (www.justkannada.in): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಅವರ ಅಭಿಮಾನಿಗಳೊಬ್ಬರು ವಾಲ್ಮೀಕಿ ರಾಮಾಯಣ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ.

ನಟ ಪುನೀತ್ ಈ ಪುಸ್ತಕ ಹಿಡಿದಿರುವ ಚಿತ್ರವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದು ‘ಬೆಟ್ಟದ ಹೂವು ಸಿನಿಮಾದಲ್ಲಿ ಎಷ್ಟೇ ದುಡ್ಡು ಸೇವ್ ಮಾಡಿದ್ರೂ ತಗೊಳ್ಳೋಕೆ ಆಗಿರಲಿಲ್ಲ. Finally a fan gifted it.’ ಎಂದು ಬರೆದುಕೊಂಡಿದ್ದಾರೆ. ಪುನೀತ್ ಅವರ ಈ ಚಿತ್ರ ಹಾಗೂ ಬರಹಕ್ಕೆ ಅಭಿಮಾನಿಗಳು ಫಿದಾ ಆಗಿದ್ದು ಸಾಕಷ್ಟು ಜನರಿಂದ ಮೆಚ್ಚುಗೆ ಸುರಿಮಳೆಯಾಗಿದೆ.

‘ಬೆಟ್ಟದ ಹೂವು’ ಚಿತ್ರದಲ್ಲಿ “ಬಿಸಿಲೇ ಇರಲಿ, ಮಳೆಯೇ ಬರಲಿ” ಹಾಡಿನಲ್ಲಿ ತಾನು ಹಣವನ್ನು ಸೇರಿಸಿ ರಾಮಾಯಣ ಪುಸ್ತಕ ತೆಗೆದುಕೊಳ್ಳುತ್ತೇನೆ ಎನ್ನುವ ಸಾಲೊಂದು ಇದ್ದು ಚಿತ್ರದ ಅಂತ್ಯದವರೆಗೂ ಆ ಬಾಲಕನಿಗೆ ಪುಸ್ತಕ ಖರೀದಿಸಲು ಸಾಧ್ಯವಾಗುವುದಿಲ್ಲ. ಇದೇ ನೆನಪಿನಲ್ಲಿ ಪುನೀತ್ ರಾಮಾಯಣ ಪುಸ್ತಕ ಹಿಡಿದು ಈ ರೀತಿ ಪೋಸ್ಟ್ ಮಾಡಿದ್ದಾರೆ.