ನವದೆಹಲಿ, ಫೆಬ್ರವರಿ 11 (www.justkannada.in): ಮೆಸೆಜಿಂಗ್ ಆ್ಯಪ್ ವಾಟ್ಸಪ್ ತನ್ನ ನೂತನ ಆನ್ ಲೈನ್ ಪೇಮೆಂಟ್ ಸೇವೆಯನ್ನು ಆರಂಭಿಸಿದೆ.

ಭಾರತದ ಯುಪಿಐ ಸೇವೆಯ ಮುಖಾಂತರ ವ್ಯಕ್ತಿಯಿಂದ ವ್ಯಕ್ತಿಗೆ ಹಣ ವಿನಿಮಯ ಸೇವೆ ಆರಂಭಿಸಿದ್ದು, ಈಗಾಗಲೇ ವಾಟ್ಸಪ್ ಈ ನೂತನ ಪೇಮೆಂಟ್ ಫೀಚರ್ ಅನ್ನು ಪರೀಕ್ಷೆ ಮಾಡಲಾಗುತ್ತಿದೆ.

ವಾಟ್ಸಪ್ ಬಳಕೆದಾರರು ಈ ನೂತನ ಫೀಚರ್ ಮೂಲಕ ಹಣ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಪ್ರಸ್ತುತ ವ್ಯಕ್ತಿಯಿಂದ ವ್ಯಕ್ತಿಗೆ ಹಣ ವಿನಿಮಯ ಮಾಡುವ ಸೇವೆಯನ್ನು ವಾಟ್ಸಪ್ ಸಂಸ್ಥೆ ಪರೀಕ್ಷೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ವ್ಯಾಪ್ತಿಯನ್ನು ಹೆಚ್ಚಿಸುವ ಸಾಧ್ಯತೆ.

ಪ್ರಸ್ತುತ ವಾಟ್ಸಪ್ ಪೇಮೆಂಟ್ ಸೇವೆ ಆರಂಭಕ್ಕೆ ಸಿದ್ಧವಾಗಿದೆಯಾದರೂ, ಇದರ ಅಂತಿಮ ಹಂತದ ಪರೀಕ್ಷೆ ಇನ್ನೂ ಚಾಲ್ತಿಯಲ್ಲಿರುವುದರಿಂದ ಈ ಬಗ್ಗೆ ವಾಟ್ಸಪ್ ಸಂಸ್ಥೆ ಹೆಚ್ಚಾಗಿ ಪ್ರಚಾರ ಮಾಡುತ್ತಿಲ್ಲ ಎನ್ನಲಾಗಿದೆ. ಪ್ರಮುಖವಾಗಿ ವಾಟ್ಸಪ್ ಪೇಮೆಂಟ್ ಆ್ಯಪ್ ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಮುಖಾಂತರ ಸೇವೆ ನೀಡಲಿದೆ. ಇದರಲ್ಲಿ ಭಾರತದ ಪ್ರಮುಖ ಬ್ಯಾಂಕ್ ಗಳಾದ ಎಸ್ ಬಿಐ, ಹೆಚ್ ಡಿಎಫ್ ಸಿ, ಎಕ್ಸಿಸ್ ಬ್ಯಾಂಕ್ ಖಾತೆಗಳನ್ನು ಜೋಡಣೆ ಮಾಡಬಹುದಾಗಿದೆ.