ಮೈಸೂರು, ಜನವರಿ 12 (www.justkannada.in): ಆರು ವರ್ಷಗಳ ಹಿಂದೆ ಕರಾವಳಿಯ ಕುಂದಾಪುರ ತಾಲೂಕಿನ ವಂಡ್ಸೆಯ ಬಾಳಿಕೆರೆ ಗ್ರಾಮದಲ್ಲಿ ಆರಂಭವಾದ ಈ ಪವರ್ ಲಿಫ್ಟರ್ ಬದುಕಿನ ಜರ್ನಿ ಈಗ ರಾಷ್ಟ್ರಾದ್ಯಂತ ಸಾಗಿದೆ… ದೇಶದ ವಿವಿಧೆಡೆ ನಡೆಯುತ್ತಿರುವ ಪವರ್ ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಂಡು ರಾಜ್ಯ, ರಾಷ್ಟ್ರದ ಕೀರ್ತಿಯನ್ನು ದುಪ್ಪಟ್ಟು ಮಾಡುತ್ತಿದೆ….weightlifter vishwanath ganiga life junney kundapur to bangalore now he is india's strong man-2016

ಹೌದು. ಬದುಕಿನ ಭಾಗವೇ ಆಗಿ ಹೋಗಿದ್ದ ಬಾರ ಹೊರುವ ಕಾಯಕವೇ ಈಗ ಸಾಧನೆಯ ಮೆಟ್ಟಿಲಾಗಿ ಮಾಡಿಕೊಂಡು ಪವರ್ ಲಿಫ್ಟಿಂಗ್ ನಲ್ಲಿ ಒಂದೊಂದೇ ಮೈಲಿಗಲ್ಲನ್ನು ಸಾಧಿಸುತ್ತ ವಿಶ್ವ ಚಾಂಪಿಯನ್ ಶಿಪ್ ಪಟ್ಟ ಗೆದ್ದು ರಾಷ್ಟ್ರಕ್ಕೆ ಪದಕ ಸಮರ್ಪಿಸುವ ಕನಸು ಹೊತ್ತಿರುವ ಈ ಸಾಧಕನ ಹೆಸರು ವಿಶ್ವನಾಥ ಗಾಣಿಗ.weightlifter vishwanath ganiga life junney kundapur to bangalore now he is india's strong man-2016-5

ಮೂಲತಃ ಕುಂದಾಪುರ ತಾಲೂಕಿನ ಪುಟ್ಟ ಗ್ರಾಮದ ವಿಶ್ವನಾಥ್ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪವರ್ ಲಿಫ್ಟಿಂಗ್ ನಲ್ಲಿ ದೊಡ್ಡ ಸಾಧನೆಯ ಕನಸು ಹೊತ್ತು ಆ ದಾರಿಯಲ್ಲಿ ಸಾಗುತ್ತಿದ್ದಾರೆ. ಇದಕ್ಕಾಗಿ ತಾವು ಮಾಡುತ್ತಿದ್ದ ಐಟಿ ಉದ್ಯೋಗವನ್ನೂ ತೊರೆದು ತಮ್ಮನ್ನು ಸಂಪೂರ್ಣ ಬಾಡಿ ಬಿಲ್ಡಿಂಗ್’ಗೆ ಸಮರ್ಪಿಸಿಕೊಂಡಿದ್ದಾರೆ.

ವಿಶ್ವವಿದ್ಯಾಲಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನಗಳಿಸುವ ಮೂಲಕ ಆರಂಭವಾದ ಈ ಯಾನ ಸದ್ಯ ರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ನಿರ್ಮಿಸುವ ಮಟ್ಟಕ್ಕೆ ಬಂದಿದೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹೆಸರಿನ ಜತೆಗೆ ದೇಶದ ಕೀರ್ತಿಯನ್ನು ಹೆಚ್ಚಿಸುವ ಗುರಿಯೊಂದಿಗೆ ತಯಾರಿ ನಡೆಸುತ್ತಿದ್ದಾರೆ ವಿಶ್ವನಾಥ್.weightlifter vishwanath ganiga life junney kundapur to bangalore now he is india's strong man-2016-1

ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ 287 ಕೆಜಿ ಬಾರ ಎತ್ತುವ ಮೂಲಕ ರಾಷ್ಟ್ರೀಯ ದಾಖಲೆ ಬರೆದ ವಿಶ್ವನಾಥ್, ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇನ್ನು ಸೇಲಂ ನಲ್ಲಿ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಸಾಧನೆಗೈದಿದ್ದಾರೆ. ಹಾಗೆಯೇ ಸೇಲಂ ನಲ್ಲಿ ರಾಷ್ಟ್ರೀಯ ಚಾಂಪಿಯನ್ ಪಟ್ಟ ಪಡೆದಿದ್ದಾರೆ. ಇಷ್ಟು ಮಾತ್ರವಲ್ಲದೇ ಸಾಕಷ್ಟು ಸ್ಪರ್ಧೆಗಳಲ್ಲಿ ಗೆದ್ದು ಸಾಧನೆಗೈದಿದ್ದಾರೆ.weightlifter vishwanath ganiga life junney kundapur to bangalore now he is india's strong man-2016-6

ಇತ್ತೀಚಿಗೆ ‘ಜೆಸ್ರೈ ಸ್ಟ್ರಾಂಗ್ ಮ್ಯಾನ್ ಇಂಡಿಯಾ’ ಗರಿ ವಿಶ್ವನಾಥ್ ಸಾಧನೆಗೆ ಒಲಿದು ಬಂದಿದೆ. ಸುಬ್ರತಾ ಕ್ಲಾಸಿಕ್ ಇಂಟರ್ ನ್ಯಾಷನಲ್ ಡೆಡ್ ಲಿಫ್ಟ್ ಚಾಂಪಿಯನ್ ಶಿಪ್ ನ ಎರಡು ವಿಭಾಗಗಳಲ್ಲಿ ಅಗ್ರ ಸ್ಥಾನ ಪಡೆದಿರುವ ಇವರು ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಪವರ್ ಲಿಫ್ಟಿಂಗ್ ನಲ್ಲಿ ಸಾಧನೆಗೈಯಬೇಕೆಂಬ ಕನಸನ್ನು ನನಸು ಮಾಡಿಕೊಳ್ಳಬೇಕೆಂದು ಮಾಡುತ್ತಿದ್ದ ಐಟಿ ಕೆಲಸವನ್ನು ತೊರೆದಿರುವ ವಿಶ್ವನಾಥ್ ಸದ್ಯ ತಮ್ಮನ್ನು ಸಂಪೂರ್ಣವಾಗಿ ಬಾಡಿ ಬಿಲ್ಡಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ.

ಸದ್ಯ ವಿಶ್ವನಾಥ್ ಅವರ ಮುಂದಿನ ಗುರಿ ವಿಶ್ವ ಚಾಂಪಿಯನ್ ನಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತರುವುದು. ಹಾಗೆಯೇ ಸೇನೆ ಸೇರಿ ದೇಶ ಸೇವೆ ಮಾಡುವ ಆಸೆ ಕೂಡ ಈ ಪವರ್ ಲಿಫ್ಟರ್’ಗಿದೆ.weightlifter vishwanath ganiga life junney kundapur to bangalore now he is india's strong man-2016-3