ಬೆಂಗಳೂರು:ನ-15:(www.justkannada.in) ರಾಜಧಾನಿ ಬೆಂಗಳೂರು ನಗರವನ್ನು ಕಸಮುಕ್ತ ನಗರವನ್ನಾಗಿ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚಿಂತನೆ ನಡೆಸಿದ್ದು, 2018ರ ವೇಳೆಗೆ ಎಲ್ಲಾ 198 ವಾರ್ಡ್ ಗಳಲ್ಲಿತ್ಯಾಜ್ಯ ಸಂಸ್ಕರಣಾ ಘಟಕ(ಎಸ್ ಡಬ್ಲೂ ಎಂ) ಸ್ಥಾಪಿಸಲು ಯೋಜನೆ ರೂಪಿಸಿದೆ.

ರಾಜ್ಯ ಹೈಕೋರ್ಟ್ ವಾರ್ಡ್ ಕಮಿಟಿ ಅರ್ಜಿಯನ್ನು ಕೇಳಿದ ಬಳಿಕ ಬಿಬಿಎಂಪಿ ಈ ನಿರ್ಧಾರ ಕೈಗೊಂಡಿದೆ. ಎಲ್ಲಾ ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲು ಜಾಗವಿರುವಾಗ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ ಮಾಡಲು ಜಾಗವಿಲ್ಲವೇಕೆ ಎಂದು ನ್ಯಾಯಾಲಯ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡ ಬಳಿಕ ಎಚ್ಚೆತ್ತ ಬಿಬಿಎಂಪಿ ಈಗ ಎಲ್ಲಾ ವಾರ್ಡ್ ಗಳಲ್ಲೂ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಮುಂದಾಗಿದೆ.

ಪ್ರತಿ ವಾರ್ಡ್ ನಲ್ಲಿ ಒಂದು ದಿನದಲ್ಲಿ 15 ಟನ್ ಕಸ ಸಂಗ್ರಹವಾಗುತ್ತದೆ ಎಂದು ಬಿಬಿಎಂಪಿ ನಿರ್ಧರಿಸಿದ್ದು, ಈ ಕುರಿತು ಉಪಕ್ರಮಗಳನ್ನು ತೆಗೆದುಕೊಳ್ಳಲು ಚಿಂತನೆ ನಡೆಸಿದೆ. ಪ್ರತಿ ಘಟಕ ಸ್ಥಾಪನೆಗೆ ಸುಮಾರು 12,000 ಚದರ ಅಡಿ ಜಾಗದ ಅಗತ್ಯವಿದ್ದು, ಬಿಬಿಎಂಪಿ ಅಧಿಕಾರಿಗಳು ಖುದ್ದಾಗಿ ಯಾವ ಜಾಗದಲ್ಲಿ ಎಸ್ ಡಬ್ಲೂ ಎಂ ಸ್ಥಾಪನೆ ಮಾಡಬೇಕು ಎಂಬುದನ್ನು ಪರಿಶೀಲನೆ ನಡೆಸಲಿದ್ದಾರೆ. ಇನ್ನು ಬಿಬಿಎಂಪಿ ಪ್ರತಿ ವಾರ್ಡ್ ನಲ್ಲೂ ಮೈಕ್ರೋ ಪ್ಲಾನ್ ಅಳವಡಿಸಲು ಚಿಂತನೆ ನಡೆಸಿದ್ದು, ಈ ಕುರಿತು ಹೈಕೋರ್ಟ್ ಗೆ ಮಾಹಿತಿ ನೀಡಿದೆ. ನ.30ರೊಳಗೆ ವಾರ್ಡ್ ಮಟ್ಟದಲ್ಲಿ ಸಮಿತಿ ಸಭೆಗಳನ್ನು ನಡೆಸಿ ನಿರ್ಧಾರ ಕೈಗೊಳ್ಳುವಂತೆ ನ್ಯಾಯಾಲಯ ತಿಳಿಸಿದೆ.

WARDS,LITTERED,WASTE PLANTS NOW

In a bid to deal with the garbage pile-up problems and Solid Waste Management (SWM) issues in the city, the Bruhat Bengaluru Mahanagara Palike (BBMP) plans to set up SWM plants in all 198 wards in the city by 2018.