ವರುಣಾ ಕ್ಷೇತ್ರವೊಂದಕ್ಕೆ 11 ಸಾವಿರ ಮಂದಿಗೆ ಲೋನ್-ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಿಂದ ಆರೋಪ…

0
152
Varuna constituency- lone - 11,000 people.

ಮೈಸೂರು,ಜನವರಿ,12,2018(www.justkannada.in): ವರುಣಾ ಕ್ಷೇತ್ರ ಒಂದಕ್ಕೆ 11 ಸಾವಿರ ಮಂದಿ ಅಬ್ಯರ್ಥಿಗಳಿಗೆ ಲೋನ್ ನೀಡಲಾಗಿದೆ. ಸ್ವಯಂ ಉದ್ಯೋಗ ಮಾಡಲು ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳಿಗೂ ಲೋನ್ ಸಾಂಕ್ಷೆನ್ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ಗಂಭೀರವಾಗಿ ಆರೋಪಿಸಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನಹಿಮಾ ಸುಲ್ತಾನ್ ಅಧ್ಯಕ್ಷೆತೆಯಲ್ಲಿ ಕೆ ಡಿ ಪಿ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸಾಮಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿಸಮಿತಿ ಅಧ್ಯಕ್ಷ ದಯಾನಂದ ಮೂರ್ತಿ, ಜಿಲ್ಲಾ ಪ್ಲಾನಿಂಗ್ ಆಫೀಸರ್ ಪ್ರಭುಸ್ವಾಮಿ ಭಾಗಿಯಾಗಿದ್ದರು. ಸಿ ಎಂ ಕಾರ್ಯಕ್ರಮ ಇರೋ ಕಾರಣ ಸಿ ಇ ಒ ಶಿವಶಂಕರ್ ಸೇರಿ ಸಾಕಷ್ಟು ಅಧಿಕಾರಿಗಳು ಕೆ ಡಿ ಪಿ ಸಭೆಗೆ ಗೈರಾಗಿದ್ದರು.

ಲೋನ್ ಸಾಂಕ್ಷನ್ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ಬಗ್ಗೆ ಅಂಭೇಡ್ಕರ್ ಅಭಿವೃದ್ಧಿ ನಿಗಮ ,ವಾಲ್ಮಿಕಿ, ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಸಾಲ ನೀಡಲಾಗಿದೆ.ವರುಣಾ ಕ್ಷೇತ್ರ ಒಂದಕ್ಕೆ 11 ಸಾವಿರ ಮಂದಿ ಅಬ್ಯರ್ಥಿಗಳಿಗೆ ಲೋನ್ ನೀಡಲಾಗಿದೆ ಎಂದು ಬೀರಿಹುಂಡಿ ಬಸವಣ್ಣ ಆರೋಪಿಸಿದರು.

key words: Varuna constituency- lone – 11,000 people.