ಬೆಂಗಳೂರು, ನವೆಂಬರ್ 13 (www.justkannada.in): ಇಮ್ರಾನ್ ಸರ್ದಾರಿಯಾ ನಿರ್ದೇಶನದ ಉಪ್ಪು ಹುಳಿ ಖಾರ ಸಿನಿಮಾದ ರೋ ರೋ ರೋಮಿಯೋ ಎಂಬ ಹಾಡು ಇತ್ತೀಚೆಗೆ ರಿಲೀಸ್ ಆಗಿದ್ದು, ಇಂಟರ್ ನೆಟ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಅನುಶ್ರೀ ಮತ್ತು ಶರತ್ ನಟಿಸಿರುವ ಹಾಡನ್ನು 1 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಈ ಹಾಡಿಗೆ ಪುನೀತ್ ರಾಜ್ ಕುಮಾರ್ ಹಿನ್ನೆಲೆ ಗಾಯನ ನೀಡಿರುವುದು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ, ನಿರ್ದೇಶಕ ಇಮ್ರಾನ್ ಸರ್ದಾರಿಯಾ ನವೆಂಬರ್ 24 ರಂದು ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದ್ದು 190 ಥಿಯೇಟರ್ ಗಳಲ್ಲಿ ಸಿಮಿಮಾ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ಮಾಲಾಶ್ರೀ ಪ್ರಮಖ ಪಾತ್ರದಲ್ಲಿ ನಟಿಸಿದ್ದು, ಜಯಶ್ರೀ, ಶಶಿ ದೇವರಾಜ್ ಮತ್ತಿತರರು ನಟಿಸಿದ್ದಾರೆ.