mysore university centenary celebrations

ಮೈಸೂರು, ಜು.08 : ಶತಮಾನೋತ್ಸವ ಸಂಭ್ರಮದ ಹೊಸ್ತಿಲಿನಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯದ ಸಡಗರ ಸಂಭ್ರಮಕ್ಕೆ ಇಂಬು ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮವೊಂದು ಆಯೋಜಿಸಲಾಗಿದೆ. ದೇಶದ ಪ್ರತಿಷ್ಠಿತ, ನಾಡಿನ ಹೆಮ್ಮೆಯ ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ, ಸಾಧನೆಯನ್ನು ಸಾರುವ ` ಥೀಮ್ ಸಾಂಗ್ ‘ ಅಂದು ಬಿಡುಗಡೆಗೊಳ್ಳಲಿದೆ.

ಇದೇ ಜು. 12 ರಂದು ಸಂಜೆ 6 ಗಂಟೆಗೆ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಿರುವ ವರ್ಣರಂಜಿತ ಸಮಾರಂಭದಲ್ಲಿ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಥೀಮ್ ಸಾಂಗ್ ಬಿಡುಗಡೆ ಮಾಡಿ ಶತಮಾನೋತ್ಸವ ಸಂಭ್ರಮಕ್ಕೆ ಅಧಿಕೃತ ಚಾಲನೆ ನೀಡುವರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭಾಗವಹಿಸುತ್ತಿರುವುದು ವಿಶೇಷ.

mysore university centenary celebrations
ಮೈಸೂರು ವಿವಿ ಬಯಲುರಂಗಮಂದಿರ

ಮಾನಸ ಗಂಗೋತ್ರಿಯ ವಿಶಾಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಸೂರು ವಿಶ್ವವಿದ್ಯಾನಿಲಯ ಈಗ 100 ವರ್ಷಗಳನ್ನು ಪೂರೈಸುತ್ತಿದೆ. ಈ ಸಂಭ್ರಮದ ಆಚರಣೆಗಾಗಿ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚನೆಗೊಂಡಿದೆ. ಈ ಸಮಿತಿ ಕಾರ್ಯಕ್ರಮದ ಸಕಲ ಸಿದ್ಧತೆಯನ್ನು ನಡೆಸಿದೆ. ಈ ಸಂಬಂಧ ಜು.12 ರಂದು ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಿರುವ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂಭ್ರಮಾಚರಣೆಗೆ ಚಾಲನೆ ನೀಡಲಾಗುತ್ತದೆ.

ಮೈಸೂರು ವಿಶ್ವವಿದ್ಯಾನಿಲಯದ ಭವ್ಯ ಇತಿಹಾಸ ಹಾಗೂ ಸಾಧಕರನ್ನು ಸ್ಮರಿಸುವ `ಥೀಮ್ ಸಾಂಗ್’ ಸಿದ್ಧಗೊಂಡಿದ್ದು ಅದನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡುವರು. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಸಾರಥ್ಯದಲ್ಲಿ ಈ ವಿಡಿಯೋ ಸಿದ್ಧಪಡಿಸಲಾಗಿದೆ. ಇದನ್ನು ಶತಮಾನೋತ್ಸವ ಸಂಭ್ರಮ ಸಮಾರಂಭದ ಅಂಗವಾಗಿ ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳಲ್ಲೂ ಬಳಸಲು ಉದ್ದೇಶಿಸಲಾಗಿದೆ.

mysore university centenary celebrations
ಬಯಲು ರಂಗಮಂದಿರ ದುರಸ್ತಿ ಕಾರ್ಯದ ಪ್ರಗತಿ ಪರಿಶೀಲಿಸುತ್ತಿರುವ ಕುಲಪತಿ ಪ್ರೊ.ರಂಗಪ್ಪ

`ಥೀಮ್ ಸಾಂಗ್ ‘ ಬಿಡುಗಡೆ ಸಮಾರಂಭ ಅತ್ಯಂತ ಆಕರ್ಷಕವಾಗಿ ಮೂಡಿ ಬರಲಿ ಎಂಬ ಸಲುವಾಗಿ ಹಂಸಲೇಖ ಮತ್ತು ತಂಡದವರು ಕಳೆದ ಹಲವಾರು ದಿನಗಳಿಂದ ಶ್ರಮಿಸುತ್ತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 150 ಹೆಚ್ಚು ನೃತ್ಯಪಟುಗಳನ್ನು ಒಳಗೊಂಡ ಕಾರ್ಯಕ್ರಮವನ್ನು ವಿಶೇಷವಾಗಿ ಸಂಯೋಜನೆಗೊಳಿಸಲಾಗಿದೆ. ಇದಕ್ಕಾಗಿ ನೃತ್ಯಪಟುಗಳು ತಾಲೀಮಿನಲ್ಲಿ ನಿರತರಾಗಿದ್ದು ಜು. 12 ರಂದು ಮೈಸೂರಿಗರ ಮನ ತಣಿಸಲು ಸಜ್ಜಾಗುತ್ತಿದ್ದಾರೆ.

mysore university centenary celebrations

ಈ ಸಮಾರಂಭದ ಮತ್ತೊಂದು ಪ್ರಮುಖ ಆಕರ್ಷಣೆ ಅಂದ್ರೆ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭಾಗವಹಿಸುತ್ತಿರುವುದು. ವರನಟ ಡಾ. ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದು ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ. ಈ ಹಿನ್ನೆಲೆಯಲ್ಲಿ ರಾಜ್ ಕುಟುಂಬಕ್ಕೆ ಮೈಸೂರು ವಿವಿ ಬಗ್ಗೆ ಅಪಾರ ಗೌರವ.

MAHESH.V

ENGLISH SUMMARY :

UoM centenary theme song to be released on July 12 

The centenary theme song, celebrating the glorious history of University of Mysore will be released at Open Air auditorium on July 12. Film star Puneet Rajkumar will release the song that has been written and composed by renowned music director Hamsalekha. UoM VC Prof.K.S. Rangappa will be present on the occasion.

 

key words : mysore university centenary celebrations