ಬಿಜೆಪಿ ನಿಯೋಗದಿಂದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ: ಆರ್ ಎಸ್ ಎಸ್ ಮುಖಂಡ ಶರತ್ ಹತ್ಯೆ ಪ್ರಕರಣ ಎನ್ ಐಎಗೆ ವಹಿಸುವಂತೆ ಮನವಿ….

0
670
Union Home Minister -Rajnath Singh -meets -BJP -RSS leader- NIA

ನವದೆಹಲಿ,ಜು,17,2017(www.justkannada.in):   ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ನಿಯೋಗ ಇಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನ ಭೇಟಿ ಮಾಡಿ ಆರ್ ಎಸ್ ಎಸ್ ಮುಖಂಡ ಶರತ್ ಹತ್ಯೆ ಪ್ರಕರಣ ಎನ್ ಐಎಗೆ ವಹಿಸುವಂತೆ ಮನವಿ ಸಲ್ಲಿಸಿದರು.Union Home Minister -Rajnath Singh -meets -BJP -RSS leader- NIA

ನವದೆಹಲಿಯಲ್ಲಿ  ಕೇಂದ್ರ ಸಚಿವ ಸದಾನಂದಗೌಡ, ಬಿಎಸ್ ಯಡಿಯೂರಪ್ಪ ,ಸಂಸದೆ ಶೋಭಾಕರಂದ್ಲಾಜೆ, ನಳೀನ್ ಕುಮಾರ್ ಕಟಿಲ್ ನೇತೃತ್ವದ ನಿಯೋಗ ಕೇಂದ್ರ ಗೃಹ ಸಚಿವ ರಾಜನಾಥ್  ಸಿಂಗ್ ಅವರನ್ನ ಭೇಟಿ ಮಾಡಿ  ಹಲವು ವಿಚಾರಗಳನ್ನು ಚರ್ಚಿಸಿದರು.

ಭೇಟಿ ಬಳಿಕ ಮಾತನಾಡಿದ ಬಿಎಸ್ ಯಡಿಯೂರಪ್ಪ, ಆರ್ ಎಸ್ ಎಸ್ ಮುಖಂಡ ಶರತ್ ಹತ್ಯೆ ಪ್ರಕರಣ ಎನ್ ಐಎಗೆ ವಹಿಸುವಂತೆ ಮನವಿ ಮಾಡಿದ್ದೇವೆ. ಇದೇ ವೇಳೆ ರಾಜ್ಯದ 24 ಸೈದ್ದಾಂತಿಕ ಹತ್ಯೆ ಬಗ್ಗೆ  ರಾಜನಾಥ್ ಸಿಂಗ್ ಅವರಿಗೆ ಮಾಹಿತಿ ನೀಡಲಾಗಿದೆ. ಜತೆಗೆ ಕಾರಗೃಹ ಇಲಾಖೆ ಡಿಐಜಿ ರೂಪಾ ಅವರ ವರ್ಗವಣೆ ಕುರಿತು ಅವರ ಗಮನಕ್ಕೆ ತಂದಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ರಾಜನಾಥ್ ಸಿಂಗ್ ಅವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

Key words: Union Home Minister -Rajnath Singh -meets -BJP -RSS leader- NIA