ತುಮಕೂರು ,ಫೆಬ್ರವರಿ,13,2018(www.justkannada.in): ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ಯುವಕರು ಈಜಲು ಹೋಗಿ ನೀರುಪಾಲಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.two-young-men-death-swimming

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಎಲೆರಾಂಪುರ ಗ್ರಾಮದ  ಕೆರೆಯಲ್ಲಿ ಘಟನೆ ನಡೆದಿದೆ. 21ವರ್ಷದ ಹರೀಶ್ ಮತ್ತು ನಿಖಿಲ್ ಮೃತಪಟ್ಟವರು ಎಂದು ತಿಳಿದು ಬಂದಿದೆ. ಒಟ್ಟು ಹನ್ನೆರಡು ಜನ ವಿದ್ಯಾರ್ಥಿಗಳು ದೇವರಾಯನದುರ್ಗ ಕ್ಕೆಂದು ಆಗಮಿಸಿದ್ರು. ಈ ವೇಳೆ ಎಲೆರಾಮ್ ಪುರ ಕೆರೆಗೆ ಈಜಲು ಹೋಗಿದ್ದಾಗ ಘಟನೆ ನಡೆದಿದೆ.two-young-men-death-swimming

ಮೃತ ಯುವಕರಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗುತ್ತಿದೆ. ವಿದ್ಯಾರ್ಥಿಗಳು ಬೆಂಗಳೂರು ಮೂಲದವರು ವಿಜಯನಗರದ ವಾಸವಿ ವಿದ್ಯಾಪೀಠ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.two-young-men-death-swimming

ಘಟನೆ ನಡೆದ  ಕೂಡಲೇ ಸ್ಥಳಕ್ಕೆ ಪೋಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೊರಟಗೆರೆ ತಾಲ್ಲೂಕು  ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Key words: Two- young men –death-swimming