ತುಮಕೂರು,ಏ,20,2017(www.justkannada.in):  ಓಮ್ನಿ ವ್ಯಾನ್ ಮೇಲೆ ಆಲದ ಮರ ಬಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ  ತುಮಕೂರು ಜಿಲ್ಲೆಯಲ್ಲಿ ನಡೆದಿದೆ. two -killed -ominous tree -Omni van

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಬೆಟ್ಟದ ಹಳ್ಳಿ ಗೇಟ್ ಬಳಿ ಈ ಘಟನೆ ಸಂಭವಿಸಿರುವುದು. 30 ವರ್ಷದ ಜಯಸಿಂಹ ಹಾಗೂ ಕಾರು ಚಾಲಕ 35 ವರ್ಷದ ಮಾರುತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಓಮ್ನಿ ವ್ಯಾನ್ ನಲ್ಲಿದ್ದ ಮೂವರಿಗೆ ಗಾಯಗಳಾಗಿವೆ.

ಜಯಸಿಂಹ ಅವರು ಕುಟುಂಬ ಸಮೇತ ಸಂಬಂಧಿಕರ ಮನೆಗೆ  ತೆರಳುತ್ತಿದ್ದ ವೇಳೆ  ವ್ಯಾನ್ ಮೇಲೆ ಆಲದ ಮರ ಬಿದ್ದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಕುರಿತು  ಚೋಳೂರು ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: two -killed -ominous tree -Omni van