ರಾಯಚೂರಿನಲ್ಲಿ ಟ್ರಾಕ್ಟರ್‍ ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಸಾವು: ಹಾವೇರಿಯಲ್ಲಿ ಶಾಲಾವಾಹನ ಹರಿದು ಬಾಲಕ ಸಾವು…

0
377

ಹಾವೇರಿ/ರಾಯಚೂರು,ಆ,10,2017(www.justkannada.in):  ಬೈಕ್  ಟ್ರಾಕ್ಟರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.two-dead-bike-collided-tractor-boy-died

ದೇವದುರ್ಗ ತಾಲ್ಲೂಕಿನ ಮಸರಕಲ್ ಗ್ರಾಮದ ಶಿವು (20) ಮಲ್ಲಪ್ಪ (21) ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಗ್ರಾಮದ ಮುಖ್ಯ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಟ್ರಾಕ್ಟರ್‍ಗೆ ವೇಗವಾಗಿ  ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಇಂದು ಬೆಳಿಗ್ಗೆ ಜನರು ವಾಕಿಂಗ್‍ಗೆ ಹೋದಾಗ ಮೃತ ದೇಹಗಳನ್ನು ಕಂಡು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಇಬ್ಬರು ಯುವಕರು ಸಾವನಪ್ಪದ್ದು ಕುಟುಂಬದ ಆಕ್ರನಂದ ಮುಗಿಲು ಮುಟ್ಟಿದೆ.

ಈ ಕುರಿತು ಗಬ್ಬೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಶಾಲಾವಾಹನ ಹರಿದು ಬಾಲಕ ಸಾವು….

ಹಾವೇರಿ ಜಿಲ್ಲೆ ಹಿರೆಕೆರೂರ ತಾಲೂಕಿನ ಹಂಸಬಾಂವಿ ಗ್ರಾಮದಲ್ಲಿ ಶಾಲಾ ವಾಹನ ಹರಿದು ಬಾಲಕ ಸಾವನ್ನಪಿದ ಘಟನೆ ನಡೆದಿದೆ. ವಿನಯಕುಮಾರ ಚಲವಾದಿ 6ವರ್ಷಮೃತ ದುರ್ದೈವಿ. ತಂದೆಯ ಜೊತೆ ವಿನಯ್ ಕುಮಾರ್ ಬೈಕ್ ನಲ್ಲಿ ಶಾಲೆಗೆ  ತೆರಳುತಿದ್ದ. ಈ ವೇಳೆ ಶಾಲಾವಾಹನದ ಹಿಂದಿನ ಗಾಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. ಈ ಕುರಿತು ಹಂಸಬಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: Two dead-bike -collided -tractor -boy -died