ವೆಂಕಯ್ಯ ನಾಯ್ಡು ಪರ ನವರಸ ನಾಯಕ ಮಾಡಿದ ಟ್ವೀಟ್ ಏನು..?

0
1849

ಬೆಂಗಳೂರು:ಆ-6:(www.justkannada.in)ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಸ್ಯಾಂಡಲ್ ವುಡ್ ನಟ, ಬಿಜೆಪಿ ನಾಯಕ ಜಗ್ಗೇಶ್‌ ಮಾಡಿರುವ ಟ್ವೀಟ್‌ವೊಂದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ರಾಜ್ಯ ಸಭೆಗೆ ವೆಂಕಯ್ಯ ನಾಯ್ಡು ಅವರು ಕರ್ನಾಟಕದಿಂದ ಅಭ್ಯರ್ಥಿಯಾಗಲು ಕನ್ನಡ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ, ಗೋ ವೆಂಕಯ್ಯ ಎಂದು ಆಂದೋಲನವನ್ನೇ ಆರಂಭಿಸಿದ್ದರು. ಆದರೆ ಈಗ ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು, ಈ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಜಗ್ಗೇಶ್, ’ಕರ್ನಾಟಕದಲ್ಲಿ ಅವರನ್ನ ಭಾಷಾ ಭಾವನೆಯಲ್ಲಿ ರಾಜ್ಯಸಭೆಗೆ ಆಕ್ಷೇಪಿಸಿದರು. ಆದರೆ ಇಂದು ಭಾರತಕ್ಕೆ ಉಪ ರಾಷ್ಟ್ರಪತಿ. ಬಾರದು ಬಪ್ಪದು…ಬಪ್ಪದು ತಪ್ಪದು..ಇದೇ ದೇವರ ಲೀಲೆ” ಎಂದು ಬರೆದಿದ್ದರು.

ಜಗ್ಗೇಶ್ ಟ್ವೀಟ್‌ ವಿರುದ್ಧ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ಕನ್ನಡಿಗರಿಗೆ ಮಾಡಿದ ಅಪಮಾನ ಎಂದು ಟೀಕಿಸಿದ್ದರು. ತಮ್ಮ ಟ್ವೀಟ್ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಜಗ್ಗೇಶ್‌ ತಮ್ಮ ಟ್ವೀಟ್ ನ್ನು ಅಳಿಸಿ ಹಾಕಿದ್ದಾರೆ.

Tweets for Venkaiah Naidu, kannadigas angry, Jaggesh, deleted Tweet