ಟ್ರಿನ್…. ಟ್ರಿನ್….ಬೈಸಿಕಲ್ : ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಗೇರ್ ಸೈಕಲ್‌ ತುಳಿಯುವ ಭಾಗ್ಯ…!

0
1288
trin-trin-cycle-mysore-corporation-mcc-mayor-chamundi-hill

trin-trin-cycle-mysore-corporation-mcc-mayor-chamundi-hill

ಮೈಸೂರು, ಜ.11, 2017 : (www.justkannada.in news ) : ` ಟ್ರಿಣ್.. ಟ್ರಿಣ್…’ ಪರಿಸರ ಸ್ನೇಹಿ ಬೈಸಿಕಲ್ ವ್ಯವಸ್ಥೆಯನ್ನು ಮೇಯರ್ ಹಾಗೂ ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಬುಧವಾರ ಪರಿಶೀಲನೆ ನಡೆಸಲಾಯಿತು.

ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಜಾರಿಗೊಳ್ಳುತ್ತಿರುವ ಈ ಯೋಜನೆಗೆ ಜಿಲ್ಲಾಧಿಕಾರಿ ರಂದೀಪ್, ಪಾಲಿಕೆ ಆಯುಕ್ತರಾದ ಜಗದೀಶ್ ಹಾಗೂ ಮೇಯರ್ ರವಿಕುಮಾರ್ ಅವರು ಮೈಸೂರಿನ ಆರ್.ಟಿ.ಓ ವೃತ್ತದ ಬಳಿ ಇರುವ ಸೈಕಲ್ ಪಾಯಿಂಟ್ ಗೆ ಭೇಟಿ ನೀಡಿ ಪರಿಶೀಲಿನೆ ನಡೆಸಿದರು.
ಈ ಯೋಜನೆಯ ಮುಖ್ಯಸ್ಥ ಚಿರಂತ್ , ಮೇಯರ್ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಇದೇ ವೇಳೆ ಟ್ರಿನ್ ಟ್ರಿನ್ ನೂತನ ಯೋಜನೆಯ ಆಶಯದಂತೆ ಮೇಯರ್ ರವಿಕುಮಾರ್, ಜಿಲ್ಲಾಧಿಕಾರಿ ರಂದೀಪ್ ಹಾಗೂ ಪಾಲಿಕೆ ಆಯುಕ್ತ ಜಗದೀಶ್ ಅವರು ಸೈಕಲ್ ಹೊಡೆಯುವ ಮೂಲಕ ಯೋಜನೆಯ ಸವಿ ಅನುಭವಿಸಿದರು.

trin-trin-cycle-mysore-corporation-mcc-mayor-chamundi-hill

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ರಂದೀಪ್ , ನೂತನ ಯೋಜನೆಯನ್ನು ಪ್ರಶಂಸಿದರು. ನೂತನ ಯೋಜನೆಯಲ್ಲಿ ೪೫೦ ಸೈಕಲ್ ಗಳಿದ್ದು, ೨೦ ಕ್ಕೂ ಹೆಚ್ಚು ಸೈಕಲ್ ಕೇಂದ್ರಗಳನ್ನ ಮಾಡಲಾಗಿದೆ. ಸೈಕಲ್ ಕೊಳ್ಳಲು ಮಾನದಂಡಗಳಿದ್ದು, ಅದು ತುಂಬ ಸುಲುಭವಾಗಿದೆ. ಸದಸ್ಯರು ವರ್ಷಕ್ಕೆ ಸಾವಿರ ರೂ ಪಾವತಿಸಿದರೆ ಅವರಿಗೆ ಆಕರ್ಷಕ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ. ಸೈಕಲ್ ಪಾಯಿಂಟ್ ಗಳಲ್ಲೇ ಸೈಕಲ್ ಗಳಿದ್ದು ಕಳ್ಳತನವಾಗುವ ಭಯವೂ ಇರೋದಿಲ್ಲ. ಎಲ್ಲವೂ ತಂತ್ರಜ್ಞಾನದ ಮೂಲಕ ಅಳವಡಿಸಿದ್ದು, ಕೇಂದ್ರದ ಸುತ್ತ ಸಿಸಿಟಿವಿ ಅಳವಡಿಸಲಾಗಿದೆ ಎಂದರು.

ಸಂಸ್ಥೆಯ ಚಿರಂತ್ ಮಾತನಾಡಿ, ಇದೊಂದು ವಿನೂತನ ಯೋಜನೆ. ಮೊದಲಿಗೆ ಎಲ್ಲರಿಗೂ ರಿಯಾಯಿತಿ ದರದಲ್ಲಿ ಈ ಯೋಜನೆ ನೀಡುತ್ತಿದ್ದೇವೆ. ಚಾಮುಂಡಿ ಬೆಟ್ಟಕ್ಕೆ ಗೇರ್ ಸೈಕಲ್‌ ನೀಡಿದ್ದು, ನಗರಕ್ಕೆ ಮಾತ್ರ ವಿತೌಟ್ ಗೇರ್ ಸೈಕಲ್ ಇದೆ. ಇದೇ ತಿಂಗಳ ಕೊನೆಯಲ್ಲಿ ಈ ಯೋಜನೆ ಜನಸಾಮಾನ್ಯರಿಗೆ ತಲುಪಿಸಲಿದ್ದೇವೆ. ಸೈಕಲ್ ಏರಿ ತಮ್ಮ ಬಾಲ್ಯದ ನೆನಪು ಹಾಗೂ ಆರೋಗ್ಯ ವೃದ್ಧಿಸಿಕೊಳ್ಳುವ ಅವಕಾಶ ಜನರಿಗೆ ಸಿಗಲಿದೆ ಎಂದರು.

 
key words : trin-trin-cycle-mysore-corporation-mcc-mayor-chamundi-hill