ಬ್ಯಾನ್ ಆದ  ಸಾವಿರ, ಐನೂರು ಮುಖಬೆಲೆಯ ನೋಟುಗಳು ಶ್ರೀರಂಗಪಟ್ಟಣದ ನಿಮಿಷಾಂಬ ದೇವಾಲಯದ ಹುಂಡಿಯಲ್ಲಿ ಪತ್ತೆ…..

0
1659

ಮಂಢ್ಯ,ಅ,12,2017(www.justkannada.in):  ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ನಿಮಿಷಾಂಬ ದೇವಾಲಯದ ಹುಂಡಿಯಲ್ಲಿ ಸಾವಿರ, ಐನೂರು ರೂಪಾಯಿ ಮುಖಬೆಲೆಯ ರದ್ದಾದ ನೋಟುಗಳು ಪತ್ತೆಯಾಗಿವೆ.thousands-banners-five-hundred-denomination-notes-nimishamba-temple

ಪುರಾಣ ಪ್ರಸಿದ್ಧ ನಿಮಿಷಾಂಭ ದೇವಾಲಯದ ಹುಂಡಿ ಎಣಿಕೆ ಕಾರ್ಯ ಇಂದು ನಡೆಸಲಾಗಿತ್ತು. ಈ ವೇಳೆ ಹುಂಡಿಯಲ್ಲಿ ಸಾವಿರ ರೂಪಾಯಿಯ ಒಂದು ನೋಟು, 500 ರೂಪಾಯಿಯ ಮುಖಬೆಲೆಯ ಎಂಟು ನೋಟುಗಳು ಪತ್ತೆಯಾಗಿವೆ. ನೋಟ್ ಬ್ಯಾನ್ ಆಗಿ ವರ್ಷ ಸಮೀಪಿಸುತ್ತ ಬಂದರೂ ಸಾವಿರ, ಐನೂರು ರೂಪಾಯಿಯನ್ನ ಭಕ್ತರು ಹುಂಡಿಗೆ ಹಾಕುತ್ತಿರುವುದನ್ನ ತಪ್ಪಿಸಿಲ್ಲ.

ದೇವಾಲಯದಲ್ಲಿನ ಒಟ್ಟು ಹದಿನೆಂಟು ಹುಂಡಿಗಳಲ್ಲಿ 12 ಹುಂಡಿಗಳ ಎಣಿಕೆ ಕಾರ್ಯ ಪೂರ್ಣವಾಗಿದ್ದು, ನಾಳೆ ಉಳಿದ ಆರು ಹುಂಡಿಗಳ ಎಣಿಕೆ ಕಾರ್ಯ ನಡೆಯಲಿದೆ. 12 ಹುಂಡಿಗಳಲ್ಲಿ ಒಟ್ಟು 42 ಲಕ್ಷದ 11 ಸಾವಿರದ  534 ರೂಪಾಯಿ ಸಂಗ್ರಹವಾಗಿದೆ.

61 ಡಾಲರ್, 10 ಡಿನಾರ್, 70 ಗ್ರಾಂ ಚಿನ್ನ, 268 ಗ್ರಾಂ ಬೆಳ್ಳಿಯನ್ನ ದೇವಿಗೆ ಭಕ್ತರು ಅರ್ಪಿಸಿದ್ದು, ಈ ಹಣವನ್ನ ಶ್ರೀರಂಗಪಟ್ಟಣದ ಎಸ್‌ಬಿಐ ಬ್ಯಾಂಕ್‌ ಗೆ ದೇವಾಲಯದ ಆಡಳಿತ ಮಂಡಳಿ ಜಮಾ ಮಾಡಿದೆ.

Key words: Thousands –banners- five hundred -denomination notes- nimishamba temple