ಬೆಳಗಿನ ಉಪಹಾರಕ್ಕೆ ಅವಲಕ್ಕಿ ಉಪ್ಪಿಟ್ಟು ಮಾಡುವುದು ಸಾಮಾನ್ಯ. ಇದೇ ಅವಲಕ್ಕಿಯಲ್ಲಿ ದೋಸೆಯನ್ನು ಮಾಡಬಹುದು. ಅವಲಕ್ಕಿ ದೋಸೆ ಮಾಡುವುದು ಹೇಗೆ ಎಂಬುದನ್ನು ಕಲಿಯಲು ಮುಂದೆ ಓದಿ..

ಬೇಕಾಗುವ ಸಾಮಗ್ರಿಗಳು:

1. ದೋಸೆ ಅಕ್ಕಿ 1ಕಪ್
2. ಅವಲಕ್ಕಿ 1/4ಕಪ್
3. ಉದ್ದಿನಬೇಳೆ 2 ಚಮಚ
4. ಮೊಸರು 1/2ಕಪ್
5. ಎಣ್ಣೆ ಸ್ವಲ್ಪ
6. ಉಪ್ಪು ಸ್ವಲ್ಪ
7. ಸೋಡ ಚಿಟಿಕೆ

ಮಾಡುವ ವಿಧಾನ: 3 ಗಂಟೆ ನೆನೆಸಿದ ಒಂದು ಬೌಲ್‍ಗೆ ದೋಸೆ ಅಕ್ಕಿ, ಅವಲಕ್ಕಿ, ಉದ್ದಿನ ಬೇಳೆ, ಮೊಸರು ಹಾಗೂ 1/2 ಕಪ್ ನೀರಿನೊಂದಿಗೆ 3 ಗಂಟೆ ನೆನೆಸುವುದು. ನಂತರ ಚೆನ್ನಾಗಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬುವುದು. ಈಗ ಸೋಡ ಹಾಗೂ ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ, ದೋಸೆ ಹಂಚು ಬಿಸಿ ಮಾಡಿ ಎಣ್ಣೆ ಹಾಕಿ ದಪ್ಪಕ್ಕೆ ಬೇಯಿಸುತ್ತಾ ಎಣ್ಣೆಯನ್ನು ಸುತ್ತಲೂ ಹಾಕುವುದು. ತಟ್ಟೆ ಮುಚ್ಚಿ ಒಂದೇ ಕಡೆ ಬೇಯಿಸಿದರೆ ಅವಲಕ್ಕಿ ಮೊಸರಿನ ದೋಸೆ ಸವಿಯಲು ಸಿದ್ಧ.