ಭಾರತೀಯ ಚಿತ್ರೋದ್ಯಮದಲ್ಲಿ ‘ದಂಗಲ್’ ದಾಖಲೆಯ ಗಳಿಕೆ

0
279

ಮುಂಬೈ, ಜನವರಿ 10 (www.justkannada.in): ಅಮೀರ್‌ ಖಾನ್‌ ಅಭಿನಯದ ಸಿನಿಮಾ ‘ದಂಗಲ್‌’ ಬಿಡುಗಡೆಯಾದ 13 ದಿನಗಳಲ್ಲಿ 300 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಹೊಸದೊಂದು ದಾಖಲೆ ಬರೆದಿದೆ.the-indian-film-industry-dangal-record-earnings

ಭಾರತೀಯ ಚಿತ್ರರಂಗದಲ್ಲಿ ಅತಿ ವೇಗವಾಗಿ 300 ಕೋಟಿ ಗಳಿಸಿದ ಚಿತ್ರ ಎಂಬ ದಾಖಲೆಗೆ ‘ದಂಗಲ್‌’ ಪಾತ್ರವಾಗಿದೆ. ಕುಸ್ತಿಪಟು ಮಹವೀರ್‌ ಸಿಂಗ್‌ ಫೋಗಟ್‌ ಅವರ ಜೀವನವನ್ನು ಆಧರಿಸಿದ ನಿತೇಶ್‌ ತಿವಾರಿ ದಮಗಲ್‌ ನಿರ್ದೇಶಿಸಿದ್ದ ಈ ಸಿನಿಮಾ ಅಮೀರ್ ಖಾನ್ ‘ಪಿಕೆ’ ದಾಖಲೆಯನ್ನು ಹಿಂದೆ ತಳ್ಳಿದೆ.

ಡಿಸೆಂಬರ್‌ 23ರಂದು ತೆರೆಕಂಡ ಚಿತ್ರ ಹೊಸ ದಾಖಲೆ ಸೃಷ್ಟಿಸುವತ್ತ ಸಾಗಿದೆ. ದಂಗಲ್‌ ಸಿನಿಮಾ ಮೊದಲ ವಾರದಲ್ಲಿಯೇ 106.95 ಕೋಟಿ ಹಣ ಗಳಿಕೆ ಮಾಡಿತ್ತು. ಕುಸ್ತಿ ಅಖಾಡ ಮತ್ತು ಜೀವನದ ಏರಿಳಿತಗಳ ಕಥಾನಕ ದಂಗಲ್‌ ಸಿನಿಮಾ ನೂರು ಕೋಟಿ ಗಳಿಕೆ ಸಮೂಹವನ್ನು ಸೇರಿರುವ ಅಮೀರ್‌ ಅಭಿನಯದ 2ನೇ ಸಿನಿಮಾ. ಈ ಹಿಂದಿನ ಪಿಕೆ  ಹೆಚ್ಚು ಗಳಿಕೆಯ ಸಿನಿಮಾ.