ಬಾಯಲ್ಲಿ ನೀರುರಿಸುವ ಮದ್ದೂರು ವಡೆಗೆ ‘ನೂರು ವರ್ಷದ ಸಂಭ್ರಮ’!

0
191

ಮೈಸೂರು, ಮಾರ್ಚ್ 15 (www.justkannada.in): ಮೈಸೂರಿನಿಂದ-ಬೆಂಗಳೂರಿಗೆ ರೈಲು ಅಥವಾ ಬಸ್ ನಲ್ಲಿ ಪ್ರಯಾಣ ಮಾಡಿದವರಿಗೆ ಮಂಡ್ಯ ದಾಟಿದ ತಕ್ಷಣ ಎಲ್ಲ ನಿಲ್ದಾಣಗಳಲ್ಲಿ ಕೇಳಿ ಬರುವ ಶಬ್ಧ ಮದ್ದೂರು ವಡೆ, ಮದ್ದೂರು ವಡೆ… ಬಿಸಿ ಬಿಸಿ ಮದ್ದೂರು ವಡೆ…

ಅದರಲ್ಲೂ ರೈಲಿನಲ್ಲಿ ಪ್ರಯಾಣಿಸುವ ಬಹುತೇಕ ಮಂದಿ ಮದ್ದೂರು ವಡೆ ಸವಿಯದೇ ಇರುವುದು ಅಪರೂಪದಲ್ಲಿ ಅಪರೂಪ. ಅಷ್ಟೊಂದು ಫೇಮಸ್ ಈ ಮದ್ದೂರು ವಡೆ. ಏತಕ್ಕೆ ಮದ್ದೂರು ವಡೆ ಬಗ್ಗೆ ಇಷ್ಟೊಂದು ಹೇಳಿ ಬಯಲ್ಲಿ ನೀರುರಿಸುತ್ತಿದ್ದಾರೆ ಅಂತೀರಾ..? ಈ ಮದ್ದೂರು ವಡೆಗೆ ಈಗ ಬರೋಬ್ಬರಿ ನೂರು ವರ್ಷದ ಸಂಭ್ರಮ!

ಯೆಸ್. ಮದ್ದೂರು ವಡೆ ರಚಿಯನ್ನು ಸವಿಯದವರೇ ಇಲ್ಲ. ವಿಶೇಷ ಅಂದ್ರೆ ಈಗ ಈ ಮದ್ದೂರು ವಡೆಗೆ ನೂರು ವರ್ಷದ ಸಂಭ್ರಮ!

ಪಿಜ್ಜಾ, ಮಂಚೂರಿಯನ್, ಪಾನಿಪೂರಿ ಹಾಗೂ ದಿನಂಪ್ರತಿ ಹೊಸರುಚಿಗಳ ಕಾಂಪಿಟೇಷನ್ ಕಾಲದಲ್ಲೂ ಹಳತೆನಿಸದೆ ಎಲ್ಲ ವಯದವರೂ ನಾಲಿಗೆ ಚಪ್ಪರಿಸುವ ಮದ್ದೂರು ವಡೆಗೆ ನೂರು ವರುಷಗಳ ಇತಿಹಾಸ.

ಮದ್ದೂರು ವಡೆ ಮದ್ದೂರಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಮದ್ದೂರಿನ ವಡೆಯ ಘಮಲು ಮೈಸೂರು-ಬೆಂಗಳೂರು ರೈಲಿನಲ್ಲಿ ರಾಮನಗರ ದಾಟಿದಂತೆ ಯಾರ್ಗೆಬೇಕು ಮದ್ದೂರ್ವಡೆ…ರಾಗ ಕೇಳಿ ಬರುತ್ತೆ. ದಶಕಗಳ ಹಿಂದೆ ಬರೀ ಮದ್ದೂರಿನಲ್ಲೇ ಸಿಗುತ್ತಿದ್ದ ವಡೆ ಇಂದು ಎಲ್ಲೆಡೆಗಳಲ್ಲಿ ಮಾಡಲ್ಪಡುತ್ತಿದೆ. ಆದ್ರೂ ಮದ್ದೂರಿನ ಸ್ಟೇಷನ್ ವಡೆಗೆ ಒಂದು ಗುಲಗಂಜಿ ತೂಕದ ರುಚಿ ಹೆಚ್ಚು.

ಮದ್ದೂರು ವಡೆ ಹುಟ್ಟಿದ್ದು ಹೀಗೆ…

ಉಡುಪಿ-ಮಂಗಳೂರು ಬೀಜಾಡಿಯ ಮದ್ವಾಚಾರ್ಯರು (ಬಿಳಿಯರು ) ರೈಲ್ವೆ ಕ್ಯಾಂಟೀನಿನಲ್ಲಿ ಇಡ್ಲಿ, ಕಾಫಿ, ಮಂಗಳೂರು ಬೋಂಡಾ ಅಂಗಡಿ ಇಟ್ಟಿದ್ರು. ರೈಲು ನಿಲ್ಲುತ್ತಿದ್ದುದು ಐದು ನಿಮಿಷ. ಡಿಮ್ಯಾಂಡ್ ಇದ್ದದ್ದು ಬೋಂಡ ಹಾಗೂ ಬೈಟು ಬೆಲ್ಲದ ಕಾಫಿಗೆ. ಒಂದು ದಿನ ಕಡಲೆಹಿಟ್ಟು ಮುಗಿದು ಹೋಯಿತು. ಅಂದಿನ ಕಾಲದಲ್ಲಿ ರೈಲ್ವೇ ನಿಲ್ದಾಣ ಊರಿನಿಂದ ದೂರವಿತ್ತು. ರೈಲು ಬರುವ ವೇಳೆ, ಹಿಟ್ಟಿಲ್
ಲ. ಜನ ಹಸಿದು ಬರುತ್ತಾರೆ. ಅದರಲ್ಲೂ ಬೋಂಡ ಕೊಡಿ ಆಚಾರ್ರೆ ಎಂದು ಓಡೋಡಿ ಬರುತ್ತಾರೆ ಏನು ಮಾಡುವುದು ಎಂದು ಯೋಚನೆಗೀಡಾದ ಆಚಾರರಿಗೆ ಹೊಳೆದದ್ದು ಹೊಸ ರೆಸಿಪಿ.

ಇದ್ದ ರವೆ, ಹಿಟ್ಟು, ಈರುಳ್ಳಿ, ಮೆಣಸಿನಕಾಯಿಗಳ ಮಿಶ್ರಣ ಸೇರಿಸಿ ಕೈಯ್ಯಲ್ಲಿ ಚಪಾತಿಯಂತೆ ತಟ್ಟಿ ಎಣ್ಣೆಗೆ ಇಳಿ ಬಿಟ್ಟರು. ರೈಲು ಬಂದಾಕ್ಷಣ ‘ಬೋಂಡ ಕೊಡಿ ಆಚಾರ್ರೆ’ ಎಂದುಲಿದ ಪಯಣಿಗರಿಗೆ ‘ಇವತ್ತು ಬೋಂಡ ಅಲ್ಲ ವಡೆ ಸ್ಪೆಷಲ್’ ಎಂದರು. ‘ಏನ್ ವಡೆ’ಗೆ ಬಂದ ಉತ್ತರ ಮದ್ದೂರು ವಡೆ. ಇದು 80 ವರುಷದ ನನ್ನಮ್ಮನಿಗೆ ಅವಳ ತಂದೆ ಹೇಳಿದ್ದ ಮದ್ದೂರು ವಡೆಯ ಹುಟ್ಟಿನ ಗುಟ್ಟು.