ಕರ್ನಾಟಕ ಮಾಧ್ಯಮ ಅಕಾಡೆಮಿ ನೇತೃತ್ವದಲ್ಲಿ ಕನ್ನಡ ಮಾಧ್ಯಮಗಳದ್ದೆ ಪ್ರತ್ಯೇಕ ` ಪೋರ್ಟಲ್’ ಆರಂಭಿಸುವ ನಿಟ್ಟಿನಲ್ಲಿ ಸಂಪಾದಕರ ಸಭೆ ಸದ್ಯದಲ್ಲೇ…

0
83
The editors'- meeting-'portal'- Kannada media - Karnataka Media Academy.

 

ಮೈಸೂರು,ನ.07, 2017 : (www.justkannada.in news ) ಕನ್ನಡ ಸುದ್ದಿ ಮಾಧ್ಯಮಗಳದ್ದೆ ಆದ ಪ್ರತ್ಯೇಕ ಪೋರ್ಟಲ್ ಆರಂಭಿಸುವ ಸಂಬಂಧ ಸದ್ಯದಲ್ಲೇ ಪತ್ರಿಕೆಗಳ ಸಂಪಾದಕರ ಸಭೆ ಕರೆದು ಚರ್ಚಿಸಲಾಗುವುದು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು ತಿಳಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ, ಮೈಸೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಇಂದು ಆಯೋಜಿಸಿದ್ದ ಹಿರಿಯ ಪತ್ರಕರ್ತರಾದ ದಿವಂಗತ ರಾಜಶೇಖರ ಕೋಟಿ ಅವರ ಸ್ಮರಣಾರ್ಥವಾಗಿ “ಸಾಮಾಜಿಕ ಜಾಲತಾಣಗಳು ಸಣ್ಣ ಪತ್ರಿಕೆಗಳ ಮೇಲೆ ಉಂಟು ಮಾಡುವ ಪರಿಣಾಮ, ಸವಾಲುಗಳು” ಕುರಿತು ವಿಚಾರ ಸಂಕಿರಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದಕ್ಕೂ ಮುನ್ನ ಮಾತನಾಡಿದ್ದ ಕನ್ನಡ ಪ್ರಭ ಪತ್ರಿಕೆ ಸಂಪಾದಕ ರವಿ ಹೆಗಡೆ, ಸೋಷಿಯಲ್ ಮೀಡಿಯಗಳು ಜನಪ್ರಿಯತೆ ಪಡೆಯುತ್ತಿರುವ ಬೆನ್ನಲ್ಲೇ ಮಾಧ್ಯಮಗಳ ಪಾತ್ರ, ಕಾರ್ಯಶೈಲಿಯ ಬಗೆಗೆ ಮಾಹಿತಿ ನೀಡಿದರು. ಗೂಗಲ್, ಟ್ವಿಟರ್, ಫೇಸ್ ಬುಕ್ ನಂಥ ಸೋಷಿಯಲ್ ಮೀಡಿಯಾಗಳಿಗೆ ಉಚಿತವಾಗಿ ಸುದ್ದಿ ಪೂರೈಸಿ ಅವುಗಳಿಗೆ ಆರ್ಥಿಕ ಸಂಪನ್ಮೂಲ ಕ್ರೂಡಿಕರಿಸಲು ನೆರವಾಗುವ ಬದಲು ಕನ್ನಡ ಮಾಧ್ಯಮಗಳದ್ದೆ ಪ್ರತ್ಯೇಕ ಸರ್ಜ್ ಇಂಜಿನ್ ಮಾದರಿಯ ಸೋಷಿಯಲ್ ಮೀಡಿಯಾ ಆರಂಭಿಸುವ ನಿಟ್ಟಿನಲ್ಲಿ ಆಲೋಚಿಸಿದರೆ ಉತ್ತಮ ಎಂಬ ಸಲಹೆ ನೀಡಿದ್ದರು.

ಈ ಸಲಹೆಗೆ ಸ್ಥಳದಲ್ಲೇ ಸ್ಪಂಧಿಸಿದ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು, ಕನ್ನಡ ಮಾಧ್ಯಮಗಳ ಹಿತಕ್ಕಾಗಿ ಅಕಾಡೆಮಿ ಸದ ಸಿದ್ದ. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಕೂಡ ಇಂಥ ಕಾರ್ಯಗಳಿಗೆ ಅಗತ್ಯ ಹಣಕಾಸಿನ ನೆರವು ನೀಡಲು ಬದ್ಧವಾಗಿದೆ. ಆದ್ದರಿಂದ ಸದ್ಯದಲ್ಲೇ ಮಾಧ್ಯಮಗಳ ಸಂಪಾದಕರ ಸಭೆ ಕರೆದು ಈ ಸಂಬಂಧ ರೂಪುರೇಷೆ ರಚಿಸಲಾಗುವುದು ಎಂದರು.

ಸಮಾರಂಭದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಿ.ಕೆ. ಮಹೇಂದ್ರ, ಅಕಾಡೆಮಿ ಕಾರ್ಯದರ್ಶಿ ಎಸ್. ಶಂಕರಪ್ಪ, ಹಿರಿಯ ಪತ್ರಕರ್ತ ಕೆ. ಶಿವಕುಮಾರ್, ಆಂದೋಲನ ಪತ್ರಿಕೆ ಸಂಪಾದಕ ರವಿ ಕೋಟಿ, ಸುದ್ದಿ ಬಿಡುಗಡೆ ಪತ್ರಿಕೆ ಸಂಪಾದಕ ಡಾ. ಯು.ಪಿ. ಶಿವಾನಂದ, ವಾರ್ತ ಇಲಾಖೆ ಸಹಾಯಕ ನಿರ್ದೇಶಕ ಆರ್. ರಾಜು ಮತ್ತಿತರರು ಉಪಸ್ಥಿತರಿದ್ದರು.

 

Role and functioning of Social Media

The editors’ meeting is to begin with a separate ‘portal’ from the Kannada media under the leadership of Karnataka Media Academy.
Karnataka media academy president M Siddaraju said that the launch of a separate portal from Kannada news channels will be discussed by the editors of the editors of the press.
Kannada journalist Ravi Hegde informed the media about the role and functioning of Social Media,

TAGS : The editors’- meeting-‘portal’- Kannada media – Karnataka Media Academy.