ಅಮ್ಮನಾಗುತ್ತಿದ್ದಾರೆ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್

0
1882

ಲಾಸ್ ಏಂಜಲೀಸ್‌, ಏಪ್ರಿಲ್ 21 (www.justkannada.in): ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್‌ ತಾವು ತಾಯಿಯಾಗುತ್ತಿರುವುದಾಗಿ ಸ್ನ್ಯಾಪ್‌ಚಾಟ್‌ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ ಸೆರೆನಾ ಈಜು ಉಡುಗೆಯಲ್ಲಿ ಇರುವ ಚಿತ್ರವೊಂದನ್ನು ಹಾಕಿದ್ದಾರೆ. ಜತೆಗೆ 20 ವಾರಗಳು ಎಂಬ ಅಡಿ ಬರಹವನ್ನು ಬರೆದುಕೊಂಡಿದ್ದಾರೆ. ‘ಸೆರೆನಾ ವಿಲಿಯಮ್ಸ್ ತಾಯಿಯಾಗಲಿದ್ದಾರೆ’ ಎಂದೂ ಲಾಸ್‌ ಏಂಜಲೀಸ್ ಮೂಲದ ಸಾರ್ವಜನಿಕ ಸಂಪರ್ಕ ಏಜನ್ಸಿಯೊಂದು ಸುದ್ದಿ ಸಂಸ್ಥೆಗೆ ನೀಡಿರುವ ಪ್ರಕಟಣೆಯಲ್ಲಿ ಹೇಳಿದೆ.

ಈ ವರ್ಷ ಸೆರೆನಾ ಕಣಕ್ಕೆ ಇಳಿಯುತ್ತಿಲ್ಲ. 2018ರಲ್ಲಿ ಅವರು ಅಂಗಳಕ್ಕೆ ಮರಳುವ ಸಾಧ್ಯತೆ ಇದೆ’ ಎಂದು ಕೂಡ ಪ್ರಕಟಣೆಯಲ್ಲಿ ಹೇಳಲಾಗಿದೆ. ಸೆರೆನಾ ವಿಲಿಯಮ್ಸ್ 20 ವಾರಗಳ ಗರ್ಭಿಣಿ. ಅವರಿಗೆ ಅಭಿನಂದನೆಗಳು’ ಎಂದು ಅಮೆರಿಕ ಟೆನಿಸ್ ಸಂಸ್ಥೆ ಟ್ವೀಟ್ ಮಾಡಿತ್ತು. ಆದರೆ ಈ ಟ್ವೀಟ್ ಅನ್ನು ಮಹಿಳೆಯರ ಟೆನಿಸ್‌ ಸಂಸ್ಥೆ ಅಳಿಸಿ ಹಾಕಿದೆ. ‘ಈ ಸುದ್ದಿ ಇನ್ನೂ ಖಚಿತಗೊಂಡಿಲ್ಲ’ ಎಂದು ಮರು ಟ್ವೀಟ್ ಮಾಡಿದೆ.