temple-installed-101-shiva-lingams-temple

ಮೈಸೂರು,ಫೆಬ್ರವರಿ,13,2018(www.justkannada.in): ಇಂದು ಶಿವರಾತ್ರಿ ಸಂಭ್ರವಮ ಅಂಗವಾಗಿ ಮೈಸೂರಿನ ಶ್ರೀ ಕಾಮೇಶ್ವರ  ಕಾಮೇಶ್ವರಿ ದೇವಾಲಯದಲ್ಲಿ  ವಿಶೇಷ ಪೂಜೆ  ನೆರವೇರಿಸಲಾಯಿತು.

ಮೈಸೂರಿನ ಅಗ್ರಹಾರದ  ರಾಮಾನುಜ  ರಸ್ತೆಯಲ್ಲಿರುವ ಶ್ರೀ ಕಾಮೇಶ್ವರ ಕಾಮೇಶ್ವರಿ  ದೇವಾಲಯದಲ್ಲಿ ಇಂದು ಮಹಾ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜಾ  ಕೈಂಕರ್ಯಗಳು  ನಡೆದವು. ಈ ವಿಷೇಶ ದಿನದ ಪೂಜೆಗೆ  ಸಾವಿರಾರು  ಭಕ್ತದಿಗಳ   ಸಮೂಹ  ಹರಿದುಬಂಡದಿತ್ತು  ದೇವಾಲಯದ  ಸಮಿತಿ ದೇವಾಲಯದಲ್ಲಿ 101 ಶಿವಲಿಂಗಗಳ ಪ್ರತಿಷ್ಠಾಪನೆ  ಮಾಡಿದ್ದು, ಇದನ್ನು ನೋಡಲು ಭಕ್ತಸಾಗರವೇ  ಹರಿದು ಬರುತ್ತಿದೆ.

ಇನ್ನು ಪ್ರತಿವರ್ಷದಂತೆ  ಈ ವರ್ಷವೂ  ಸಹ 101 ಶಿವಲಿಂಗಗಳನ್ನು  ಪ್ರತಿಷ್ಠಾಪಿಸಿದೆ ಹಾಗೂ ಇಂದು ರಾತ್ರಿ  ವಿಶೇಷ ಪೂಜೆಗಳೊಂದಿಗೆ  ಜಾಗರಣೆ ಮಾಡಲಾಗುವುದು ಮತ್ತು ಈ ವಿಶೇಷ ದಿನದ ಪೂಜೆಗೆ ಸಾವಿರಾರು ಭಕ್ತದಿಗಳು ಸಾಕ್ಷಿಯಾಗಲಿದ್ದಾರೆ.

 

Key words: temple –installed- 101 Shiva Lingams -temple,