ಐರ್ಲೆಂಡ್ ವಿರುದ್ಧ ಟಿ-20 ಸರಣಿ ಆಡಲಿದೆ ಟೀಂ ಇಂಡಿಯಾ

0
321

ದುಬೈ, ಜನವರಿ 11 (www.justkannada.in): ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಭಾರತ ಐರ್ಲೆಂಡ್ ವಿರುದ್ಧ ಟಿ2೦ ಸರಣಿಯನ್ನಾಡಲಿದೆ ಎಂದು ಬಿಸಿಸಿಐ ಹೇಳಿದೆ.

ಡಬ್ಲಿನ್ ನಲ್ಲಿ ಜೂ.27-29 ರಂದು ಟಿ 20 ಪಂದ್ಯ ನಡೆಯಲಿದ್ದು, ಈ ಸರಣಿಯ ಬಳಿಕ ಭಾರತ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. 2007 ರ ನಂತರ ಮೊದಲ ಬಾರಿಗೆ ಭಾರತ ಕ್ರಿಕೆಟ್ ತಂಡ ಐರ್ಲೆಂಡ್ ತಂಡದ ವಿರುದ್ಧ ಪಂದ್ಯವನ್ನಾಡುತ್ತಿದೆ.

ಐರ್ಲೆಂಡ್ ತಂಡದ ನಂತರ ಭಾರತ ಇಂಗ್ಲೆಂಡ್ ವಿರುದ್ಧ 3 ಟಿ20, 3 ಏಕದಿನ ಪಂದ್ಯ, 5 ಟೆಸ್ಟ್ ಪಂದ್ಯಗಳನ್ನಾಡಲಿದೆ.