ನವದೆಹಲಿ, ನವೆಂಬರ್ 14 (www.justkannada.in): ಭಾರತೀಯ ಕ್ರಿಕೆಟ್​ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಗ್​ ಗಿಫ್ಟ್ ನೀಡಿದ್ದು, ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾದ ಎಲ್ಲಾ ಆಟಗಾರರು ಬ್ಯುಸಿನೆಸ್​ ಕ್ಲಾಸ್​ನಲ್ಲಿ ಪ್ರಯಾಣಿಸಲು ಸಮ್ಮತಿಸಿದೆ.

ಸುಪ್ರೀಂ ಕೋರ್ಟ್​ನಿಂದ ನೇಮಕವಾಗಿರುವ ಆಡಳಿತಾಧಿಕಾರಿಗಳ ಸಮಿತಿಯ ಸಭೆಯಲ್ಲಿ ಆಟಗಾರರ ಪ್ರಸ್ತಾವನೆಗೆ ಅನುಮತಿ ನೀಡಲಾಗಿದೆ. ಇದರಿಂದಾಗಿ ಭಾರತೀಯ ಕ್ರಿಕೆಟ್​ ತಂಡದ ಎಲ್ಲಾ ಆಟಗಾರರು ದೇಶೀಯ ವಿಮಾನಗಳಲ್ಲಿ ಮತ್ತು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಬ್ಯುಸಿನೆಸ್​ ಕ್ಲಾಸ್​ನಲ್ಲಿ ಪ್ರಯಾಣಿಸಲಿದ್ದಾರೆ ಎಂದು ಬಿಸಿಸಿಐನ ಹಂಗಾಮಿ ಅಧ್ಯಕ್ಷ ಸಿಕೆ ಖನ್ನಾ ತಿಳಿಸಿದ್ದಾರೆ.

ಈ ಹಿಂದೆ ಹಾರ್ದಿಕ್​ ಪಾಂಡ್ಯ, ಕೆ.ಎಲ್​.ರಾಹುಲ್​, ಮೊಹಮ್ಮದ್​ ಶಮಿ ಸೇರಿದಂತೆ ಹಲವು ಆಟಗಾರರು ದ್ವಿತೀಯ ದರ್ಜೆಯಲ್ಲಿ ಪ್ರಯಾಣಿಸುವಾಗ ಅಭಿಮಾನಿಗಳು ಸೆಲ್ಫಿಗಾಗಿ ಪೀಡಿಸುತ್ತಾರೆ. ಜತೆಗೆ ಲಗೇಜ್​ ಕೊಂಡೊಯ್ಯಲು ಸಹ ಸಮಸ್ಯೆಯಾಗುತ್ತಿದೆ. ಸೀಟುಗಳ ನಡುವೆ ಅಂತರ ಕಡಿಮೆ ಇರುವುದರಿಂದ ಕಾಲು ಚಾಚಿಕೊಳ್ಳಲೂ ಸಹ ಸಮಸ್ಯೆಯಾಗುತ್ತಿದೆ ಎಂದು ದೂರಿದ್ದರು.