ಭಾರತ-ಶ್ರೀಲಂಕಾ 2ನೇ ಟೆಸ್ಟ್: ಸಿಂಹಳೀಯರ ಪೆವಿಲಿಯನ್ ಪೆರೇಡ್ !

0
2898

ಕೊಲಂಬೊ, ಆಗಸ್ಟ್ 05 (www.justkannada.in): ಭಾರತ – ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶ್ರೀಲಂಕಾ 49. 4 ಓವರ್‌ಗಳಲ್ಲಿ 183 ರನ್‌ ಗಳಿಸಿ ಆಲೌಟ್‌ ಆಗಿದೆ.

ಶುಕ್ರವಾರ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ 9 ವಿಕೆಟ್‌ಗಳಿಗೆ 622 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು.

ನಂತರ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡ ಎರಡನೇ ದಿನದಾಟ ಅಂತ್ಯಕ್ಕೆ ಎರಡು ವಿಕೆಟ್‌ ಕಳೆದುಕೊಂಡು 50 ರನ್‌ ಗಳಿಸಿತ್ತು.

ಶನಿವಾರ ಮೂರನೇ ದಿನದಾಟ ಆರಂಭಿಸಿದ ಶ್ರೀಲಂಕಾ 49. 4 ಓವರ್‌ಗಳಲ್ಲಿ 183 ರನ್‌ ಗಳಿಸಿ ಆಲೌಟ್‌ ಆಯಿತ್ತು. ಇದರಿಂದ ಭಾರತ 439 ರನ್ ಮುನ್ನಡೆ ಸಾಧಿಸಿದೆ. ಫಾಲೋ ಆನ್ ನಲ್ಲಿ ಸಿಲುಕಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಸಿಂಹಳೀಯರು ಸದ್ಯ ಒಂದು ವಿಕೆಟ್ ಕಳೆದುಕೊಂಡು 62 ರನ್ ಗಳಿಸಿದ್ದಾರೆ.