ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ- ಅನುಷ್ಕಾ ಮದುವೆಗೆ ಡೇಟ್ ಫಿಕ್ಸ್…?

0
801
Team India captain- Virat Kohli -Anushka -Wedding Date- Fix

ಮುಂಬೈ,ಡಿ,6,2017(www.justkannada.in): ಟೀಂ ಇಂಡಿಯಾ  ನಾಯಕ ವಿರಾಟ್‌‌ ಕೊಹ್ಲಿ ಹಾಗೂ ಬಾಲಿವುಡ್‌ ಬೆಡಗಿ ಅನುಷ್ಕಾ ಶರ್ಮಾ ಅವರ ವಿವಾಹಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ.

ಟೀಂ ಇಂಡಿಯಾ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಹಾಗೂ ಬಾಲಿವುಡ್‌‌ ನಟಿ ಅನುಷ್ಕಾ ಶರ್ಮಾ ಮುಂದಿನ ವಾರ ಮದುವೆ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ, ಇಟಲಿಯಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಸುದ್ದಿ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದೆ.

ಡಿಸೆಂಬರ್‌‌ 9, 10, 11 ಹಾಗೂ 12ರಂದು ಕೊಹ್ಲಿ-ಅನುಷ್ಕಾ ಮದುವೆಯಾಗಲಿದ್ದು, ಈಗಾಗಲೇ ಮದುವೆಗಾಗಿ ವಿರಾಟ್‌‌ ಕೊಹ್ಲಿ ಗೆಳೆಯರು ಹಾಗೂ ಕುಟುಂಬ ಇಟಲಿಗೆ ತೆರಳಲು ಟಿಕೆಟ್‌ ಕಾಯ್ದಿರಿಸಿದ್ದಾರೆ ಎಂದು  ಹೇಳಲಾಗುತ್ತಿದೆ.

Key words: Team India captain- Virat Kohli -Anushka -Wedding Date- Fix