ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಇದುವರೆಗೆ 1005.79 ಕೋಟಿ ರೂ. ಬಿಡುಗಡೆ

0
290

ramesh-kumarಬೆಂಗಳೂರು: ಜ-11: (www.justkannada.in)ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 2009 ರಿಂದ ಇಲ್ಲಿಯವರೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್.ಎ.ಎಸ್.ಟಿ.) ನಿಂದ 1,95,529 ಪ್ರಕರಣಗಳಿಗೆ ಒಟ್ಟು 1,005.79 ಕೋಟಿಗಳ ವೆಚ್ಚವನ್ನು ಖಾಸಗಿ ಆಸ್ಪತ್ರೆಗಳಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿ, ಯಶಸ್ವಿನಿ ಯೋಜನೆ ಹಾಗೂ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯನ್ನು (2015-16 ರಿಂದ) ಹೊರತುಪಡಿಸಿ ರೂ. 1,005.79 ಕೋಟಿಗಳ ವೆಚ್ಚವನ್ನು ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್‍ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಜಪೇಯಿ ಆರೋಗ್ಯ ಶ್ರೀ ಯೋಜನೆಗೆ 164307 ಪ್ರಕರಣಗಳಿಗೆ ಸಂಬಂಧಿಸಿದಂತೆ 931.17 ಕೋಟಿ ರೂ.ಗಳು, ರಾಜೀವ್ ಆರೋಗ್ಯ ಭಾಗ್ಯ ಯೋಜನೆಯ 4022 ಪ್ರಕರಣಗಳಿಗೆ 19.24 ಕೋಟಿ ರೂ. ಗಳು, ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ 2549 ಪ್ರಕರಣಗಳಿಗೆ ಸಂಬಂಧಿಸಿದಂತೆ 20.20 ಕೋಟಿ ರೂ.ಗಳು, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯ 21787 ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 13.41 ಕೋಟಿ ರೂ.ಗಳು ಹಾಗೂ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯ ಒಟ್ಟು 2864 ಪ್ರಕರಣಗಳಿಗೆ 21.79 ಕೋಟಿ ರೂ.ಗಳನ್ನು ಒಟ್ಟಾರೆ 1,95,529 ಪ್ರಕರಣಗಳಿಗೆ ಸಂಬಂಧಿಸಿದಂತೆ 1,005.79 ಕೋಟಿ ರೂ.ಗಳನ್ನು ಇದುವರೆವಿಗೆ ಬಿಡುಗಡೆ ಮಾಡಲಾಗಿದೆ.

ಈಗಾಗಲೇ ಸರ್ಕಾರಿ ಆಸ್ಪತ್ರೆಗಳು/ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಒಳಗೊಂಡು ಎಲ್ಲಾ ಸಾರ್ವಜನಿಕರಿಗೆ ಎಲ್ಲಾ ರೀತಿಯ ಚಿಕಿತ್ಸೆಗಳನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡಲು ಕ್ರಮ ಜರುಗಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಆತಂಕಕ್ಕೆ ಒಳಪಡುವ ಅವಶ್ಯಕತೆ ಇರುವುದಿಲ್ಲ. ಇದುವರೆಗೆ 1000 ಕೋಟಿ ರೂ. ಮೇಲ್ಪಟ್ಟು ಹಣವನ್ನು ಖಾಸಗಿ ಆಸ್ಪತ್ರೆಗಳಿಗೆ ಜಮೆ ಮಾಡಿದ್ದು, ಬಾಕಿ ಇರುವ ಕೇವಲ ಅಂದಾಜು ರೂ. 100 ಕೋಟಿ ಗೆ ಖಾಸಗಿ ಆಸ್ಪತ್ರೆಗಳು ಉಚಿತ ಸೇವೆಯನ್ನು ನಿಲ್ಲಿಸಿರುವುದು ಸಮಂಜಸವಾಗಿದೆಯೇ ಎಂದು ಜನ ತೀರ್ಮಾನ ಮಾಡಲಿ.

ಜನವರಿ 10 ರಂದು 186 ಆಸ್ಪತ್ರೆಗಳಿಗೆ ರೂ. 34.25 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಬಾಕಿ ಪಾವತಿಗೂ ಕೂಡ ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Suvarna Arogya Suraksha Trust,K. R. Ramesh Kumar