ಬೆಂಗಳೂರು:ಏ-21:(www.justkannada.in)ವಾರದಲ್ಲಿ ಒಂದು ದಿನ ಪೆಟ್ರೋಲ್‌, ಡೀಸೆಲ್‌ ಅನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡುವ ಮೂಲಕ ದೇಶ ಕಚ್ಚಾ ತೈಲದ ಆಮದನ್ನು ತಗ್ಗಿಸಬಹುದು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಅಭಿಪ್ರಾಯದಂತೆ ಮೇ 14ರಿಂದ ಭಾನುವಾರ ಪೆಟ್ರೋಲ್ ಬಂಕ್ ಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ.

ಕರ್ನಾಟಕ ರಾಜ್ಯ ಪೆಟ್ರೋಲಿಯಂ ಫೆಡರೇಷನ್ ಅಸೋಸಿಯೇಷನ್ ಪ್ರತಿ ಭಾನುವಾರ ಪೆಟ್ರೋಲ್ ಬಂಕ್ ಗಳನ್ನು ಬಂದ್ ಮಾಡುವ ವಿಚಾರವಾಗಿ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಈ ಹಿನ್ನಲೆಯಲ್ಲಿ ಮುಂದಿನ ನಿರ್ಧಾರ ಕೈಗೊಳ್ಳುವ ವರೆಗೂ ಭಾನುವಾರವೂ ಪೆಟ್ರೋಲ್ ಬಂಕ್ ಗಳು ಕಾರ್ಯನಿರ್ವಹಿಸಲಿದೆ.

ಇನ್ನು ಪೆಟ್ರೋಲ್‌ ಬಂಕ್ ಗಳನ್ನು ಮುಚ್ಚುವ ದಕ್ಷಿಣ ಭಾರತ ರಾಜ್ಯಗಳ ಪೆಟ್ರೋಲ್‌ ಬಂಕ್‌ ಮಾಲೀಕರ ಸಲಹೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಲಿದೆ ಎಂದು ತೈಲ ಸಚಿವಾಲಯ ಅಭಿಪ್ರಾಯಪಟ್ಟಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು, “ವಾರದಲ್ಲಿ ಒಂದು ದಿನ ಪೆಟ್ರೋಲ್‌, ಡೀಸೆಲ್‌ ಅನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡುವ ಮೂಲಕ ದೇಶ ಕಚ್ಚಾ ತೈಲದ ಆಮದನ್ನು ತಗ್ಗಿಸಬಹುದು. ಈ ಮೂಲಕ ದೇಶಕ್ಕೆ ಇಂಧನವನ್ನು ಉಳಿತಾಯ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ “ಮನ್‌ ಕಿ ಬಾತ್‌”ನಲ್ಲಿ ಹೇಳಿದ್ದಾರೆಯೇ ಹೊರತು, ವಾರದಲ್ಲಿ ಒಂದು ದಿನ ಪೆಟ್ರೋಲ್‌ ಬಂಕ್‌ ಗಳನ್ನು ಮುಚ್ಚಲು ಅಲ್ಲ ಎಂದು ಹೇಳಿದ್ದಾರೆ.

ಮತ್ತೊಂದೆಡೆ ದೇಶದಲ್ಲಿ ಶೇ.80ರಷ್ಟು (53,224) ಪೆಟ್ರೋಲ್‌ ಬಂಕ್ ಗಳನ್ನು ಹೊಂದಿರುವ ಇಂಡಿಯನ್‌ ಪೆಟ್ರೋಲಿಯಂ ಡೀಲರ್ ಅಸೋಸಿಯೇಷನ್‌, ಪಂಪ್‌ ಮುಚ್ಚುವ ಪ್ರಕ್ರಿಯೆಯಲ್ಲಿ ತಾನಿಲ್ಲ ಎಂದಿದೆ. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಪುದುಚೇರಿ, ಕರ್ನಾಟಕ, ಮಹಾರಾಷ್ಟ್ಯದ ಕೆಲ ಪ್ರದೇಶಗಳು ವಿಶೇಶವಾಗಿ ಮುಂಬೈಯಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಪೆಟ್ರೋಲ್ ಹಾಗೂ ಡೀಸೆಲ್ ಗೆ ಹೆಚ್ಚಿನ ಕಮಿಷನ್ ಗೆ ಒತ್ತಡ ಹೇರುವ ನಿಟ್ಟಿನಲ್ಲಿ ಈ ರಾಜ್ಯಗಳಲ್ಲಿ ಮೇ 14ರಿಂದ ಭಾನುವಾರಗಳಂದು ಪೆಟ್ರೋಲ್‌ ಬಂಕ್ ಗಳಿಗೆ ರಜೆ ನೀಡಲು ನಿರ್ಧರಿಸಿದ್ದರು. ಒಕ್ಕೂಟದ ನಿರ್ಧಾರಕ್ಕೆ ಕರ್ನಾಟಕ ಡೀಲರ್ ಗಳು ಸಮ್ಮತಿ ಸೂಚಿಸಿದ್ದರು.

ದಕ್ಷಿಣ ಭಾರತದಲ್ಲಿ ಪ್ರತಿ ಭಾನುವಾರ ಪೆಟ್ರೋಲ್ ಪಂಪ್ ಗಳನ್ನು ಬಂದ್ ಮಾಡುವ ನಿರ್ಧಾರ ಕೈಗೊಂಡಿರುವ ಬಂಕ್ ಮಾಲೀಕರ ನಿರ್ಧಾರಕ್ಕೆ ಭಾರತೀಯ ಪೆಟ್ರೋಲ್ ಮಾರಾಟಗಾರರ ಒಕ್ಕೂಟ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತಾನು ಪೆಟ್ರೋಲ್ ಉಳಿತಾಯ ಮಾಡುವ ಗುರಿ ಇಟ್ಟುಕೊಂಡಿದ್ದೇನೆ ಹೊರತು ಪೆಟ್ರೋಲ್ ಬಂಕ್ ಮಾಲಿಕರು ತಮ್ಮ ಬಂಕ್ ಗಳನ್ನು ಮುಚ್ಚಲಿ ಎಂದಲ್ಲ ಎಂದು ತಿಳಿಸಿದೆ.

ಮೇ 14ರಿಂದ ಪ್ರತಿ ಭಾನುವಾರ ಪೆಟ್ರೋಲ್ ಬಂಕ್ ಗಳನ್ನು ಬಂದ್ ಮಾಡುವ ನಿರ್ಧಾರವನ್ನು ತೈಲ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಇಂತಹ ನಿರ್ಧಾರಗಳಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತದೆ ಎಂದು ಕಿಡಿಕಾರಿದೆ.

Sundy closed plan, petrol pumps,not final
Final decision to be taken at executive meeting of state federation of petroleum associations by this month end

The Karnataka State Federation of Petroleum Associations has not yet taken a final call on shutting petrol pumps in the state on Sundays. Which means, there is a possibility that the state’s petrol pumps will function as usual on Sundays too.