ಬೇಸಿಗೆಗೆ ರುಚಿ, ಆರೋಗ್ಯಕರವಾದ ಚಿಕನ್ ಸಲಾಡ್!

0
1606

ಬಿರು ಬೇಸಿಗೆ ಈ ವೇಳೆಯಲ್ಲಿ ಹೆಚ್ಚು ಖಾರವಾದ ಮಾಂಸಾಹಾರ ಸೇವನೆ ಧ್ಯವಿಲ್ಲ. ಹಾಗಾಗಿ ಚಿಕನ್‌ ಜೊತೆ ಹಸಿರು ತರಕಾರಿ ಸೇರಿಸಿ, ತೆಳುವಾದ ಮಸಾಲೆಯೊಂದಿಗೆ ಆರೋಗ್ಯಕರವಾದ ಚಿಕನ್ ಸಲಾಡ್ ಮಾಡಿಕೊಳ್ಳಬಹುದು. ಚಿಕನ್ ಸಲಾಡ್ ರೆಸಿಪಿ ಕಲಿಯಬೇಕಾ…? ಹಾಗಾದರೆ ಮುಂದೆ ಓದಿ, ಒಮ್ಮೆ ಟ್ರೈ ಮಾಡಿ…

ಬೇಕಾಗುವ ಸಾಮಗ್ರಿಗಳು
ಮೂಳೆ ರಹಿತ ಕೋಳಿ ಮಾಂಸ 250 ಗ್ರಾಂ, ಟೊಮೆಟೊ, ಸೌತೇಕಾಯಿ, ದೊಡ್ಡ ಮೆಣಸಿನಕಾಯಿ, ಮಶ್ರೂಮ್, ಈರುಳ್ಳಿ, ಈರುಳ್ಳಿ ಹೂ, ಕ್ಯಾರೆಟ್, ಮೂಲಂಗಿ, ಬೀನ್ಸ್, ಹೂಕೋಸು, ಹಸಿಮೆಣಸಿನಕಾಯಿ, ಪರಂಗಿಕಾಯಿ, ಪೈನಾಪಲ್.

ಡ್ರೆಸ್ಸಿಂಗ್ ಸಾಸ್: 2 ಚಮಚ ಸೋಯಾ ಸಾಸ್, 1 ಚಮಚ ವಿನೆಗರ್, ಆಲಿವ್ ಎಣ್ಣೆ 5 ಚಮಚ ಈ ಎಲ್ಲವನ್ನು ವಿಶ್ರಣ ಮಾಡಿ ಸಲಾಡ್‌ನೊಂದಿಗೆ ಮಿಶ್ರಣಮಾಡಿಕೊಳ್ಳಬೇಕು.

ಚಿಕನ್ ತುಂಡುಗಳನ್ನು ಬೇಯಿಸಿ ಇಟ್ಟುಕೊಳ್ಳಬೇಕು. ಇಷ್ಟವಾದ ಹಸಿರು ಎಲೆಗಳು, ಹಸಿರು ತರಕಾರಿ, ಹಸಿಮೆಣಸಿನಕಾಯಿಯನ್ನು ಸಣ್ಣ ತುಂಡುಗಳಾಗಿ ಹೆಚ್ಚಿಕೊಳ್ಳಬೇಕು. ಇದರೊಂದಿಗೆ ಬೇಯಿಸಿದ ಚಿಕನ್‌ನೊಂದಿಗೆ ಮಿಶ್ರಣ ಮಾಡಿ ಡ್ರಸ್ಸಿಂಗ್ ಸಾಸ್ ಬೆರಸಿ ಸೇವಿಸಬಹುದು.