` ಕಿರಗೂರಿನ ‘ ಈ ಗಯ್ಯಾಳಿಗೆ ಈಗ ಹೈಟು-ವೈಟೂ ದೇ ಪ್ರಾಬ್ಲಮ್…….!

0
782
sukrutha-wagle-kannada-actress-diet-hight-model

 

ಬೆಂಗಳೂರು, ಜ.12, 2018 : (www.justkannada.in news ) : ಸ್ಯಾಂಡಲ್ ವುಡ್ ನ ಬಹುಮುಖ ಪ್ರತಿಭೆ , ಕಿರುಗೂರಿನ ಗಯ್ಯಳಿ ಸುಕ್ರತಾ ವಾಗ್ಲೆಗೆ ಈಗ ಹೈಟು ಮತ್ತು ವೈಟ್ ಸಮಸ್ಯೆ ಕಾಡಲು ಶರುವಾಗಿದೆಯಂತೆ. ಈ ಬಗ್ಗೆ ಆಕೆಯೇ ಫೇಸ್ ಬುಕ್ ಸ್ಟೇಟಸ್ ಹಾಕಿದ್ದು, ಅಭಿಮಾನಿಗಳಿಗೆ ಏನ್ ಮಾಡ್ಲಿ..? ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

sukrutha-wagle-kannada-asukrutha-wagle-kannada-actress-diet-hight-modelctress-diet-hight-model

ಕನ್ನಡದ ನಟಿಯರಿಗೆ ಹೋಲಿಸಿಕೊಂಡಲ್ಲಿ ತುಸು ಎತ್ತರವೇ ಇರುವ ಸುಕ್ರತಾ ವಾಗ್ಲೆ, ನಮ್ಮಂಥ ಲಂಬೂಗಳಿಗೆ ತೂಕದ್ದೇ ಒಂದು ಸಮಸ್ಯೆ ಎಂದಿದ್ದಾರೆ. ಸ್ವಲ್ಪ ಹೆಚ್ಚಿಗೆ ದಪ್ಪವಾದರು ಕಷ್ಟ, ತೆಳ್ಳಗಾದ್ರು ಕಷ್ಟ ಎಂದು ಸಂಕಟ ವ್ಯಕ್ತಪಡಿಸಿದ್ದಾರೆ.

sukrutha-wagle-kannada-actress-diet-hight-model
ಮಾಡಲಿಂಗ್ ಕ್ಷೇತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದ ಈ ಬೆಡಗಿ ಕಿರಗೂರಿನ ಗಯ್ಯಾಳಿಗಳು, ಜಟ್ಟ, ದಯವಿಟ್ಟು ಗಮನಿಸಿ, ಶುದ್ಧಿ.. ಸಿನಿಮಾಗಳ ಮೂಲಕ ಗಮನ ಸೆಳೆದವರು. ಇದೀಗ ಮೇಘ ಆಲಿಯಾಸ್ ಮ್ಯಾಗಿ ಸಿನಿಮಾದ ಮೂಲಕ ಮತ್ತೆ ರಂಜಿಸಲು ಸಿದ್ದವಾಗುತ್ತಿದ್ದಾರೆ ಸುಕ್ರತಾ. ಈ ನಡುವೆ ಎತ್ತರದ ನಟಿಯರ ಸಂಕಷ್ಟವನ್ನು ಫೇಸ್ ಬುಕ್ ಮೂಲಕ ತೋಡಿಕೊಂಡಿದ್ದಾರೆ.

sukrutha-wagle-kannada-actress-diet-hight-model
ನಮ್ಮಂಥ ಎತ್ತರದ ನಟಿಯರು ಆಸೆಪಟ್ಟು ಡಯಟ್ ಗೆ ಕೈಕೊಟ್ಟು ಹೆಚ್ಚಾಗಿ ತಿಂದು ತೂಕ ಹೆಚ್ಚಿಸಿಕೊಂಡರೆ ದಡೂತಿಯಂತೆ ಕಾಣಿಸುತ್ತೇವೆ. ತೂಕಕ್ಕೆ ಭಯಪಟ್ಟು ಫುಲ್ ಡಯಟ್ ಮಾಡಲು ಹೋಗಿ ತೆಳ್ಳಗಾದರೆ ಪೀಚಲು ಥರ ಕಾಣಿಸುತ್ತೇವೆ. ಇದಕ್ಕೇನು ಪರಿಹಾರ ಫ್ರೆಂಡ್ಸ್ ಎಂದು ಸಲಹೆ ಕೇಳಿದ್ದಾರೆ.
Tags : sukrutha-wagle-kannada-actress-diet-hight-model

Problem with we tall girls is that a little extra kilos would make us look huge and little less make us look skinny. It’s hard to find out ideal weight !