ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಎಂಟೆಕ್ ವಿದ್ಯಾರ್ಥಿ…

0
706
student-surrendered -suicide - seventh floor

ಬೆಂಗಳೂರು, ಆ,11,2017(www.justkannada.in): ಎಂಟೆಕ್ ವಿದ್ಯಾರ್ಥಿಯೋರ್ವ ಏಳನೇ ಮಹಡಿಯ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.student-surrendered -suicide - seventh floor

ನಗರದ ಎಲೆಕ್ಟ್ರಾನ್ ಸಿಟಿಯ ಐಐಟಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಆಂಧ್ರ ಪ್ರದೇಶ ಮೂಲದ ಸಾಯಿ ಶರತ್(22) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಈತ ಇದೇ ಕಾಲೇಜಿನಲ್ಲಿ ಎಂಟೆಕ್ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದು,ಈತನ ಸಾವಿಗೆ ಕಾರಣ ತಿಳಿದು ಬಂದಿಲ್ಲ.

ಘಟನಾ ಸ್ಥಳಕ್ಕೆ ಎಲೆಕ್ಟ್ರಾನ್ ಸಿಟಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

key words: student-surrendered -suicide – seventh floor