ಸಿಎಂ ಸಿದ್ದರಾಮಯ್ಯರಿಂದ ಉಗ್ರವಾದಿ ಎಂಬ ಹೇಳಿಕೆ ಹಿನ್ನೆಲೆ: ರಾಯಚೂರಿನಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಬಿಜೆಪಿ ಪ್ರತಿಭಟನೆ

0
145

ರಾಯಚೂರು,ಜನವರಿ12,2018(www.justkannada.in): ಬಿಜೆಪಿ, ಆರ್ ಎಸ್ ಎಸ್ ಉಗ್ರವಾದಿಗಳು ಎಂದು ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆ ಖಂಡಿಸಿ ರಾಯಚೂರಿನಲ್ಲಿ ಕಾಂಗ್ರೇಸ್ ಪಕ್ಷದ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಪ್ರತಿಭಟನೆ ನಡೆಸಿದರು.

ಪ್ರಜಾಪ್ರಭುತ್ವದ ಅಡಿ ದೇಶದ ಸಂವಿಧಾನ ನೀಡಿದ ಅಧಿಕಾರದಂತೆ ಜನತೆ ದೇಶದಲ್ಲಿ 19 ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಿದೆ. ಆದರೆ ಸಿಎಂ ಸಿದ್ದರಾಮಯ್ಯ ಕೋಟ್ಯಾಂತರ ಮತದಾರರಿಗೆ ಅವಮಾನ ಮಾಡಿ ಉಗ್ರರೆಂದು ಸಂಭೋದಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಪ್ರಜಾಪ್ರಭುತ್ವದ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿ ಪ್ರತಿಭಟನಾಕಾರರು ಕಿಡಿಕಾರಿದರು.

Key words: Statement -terrorist -CM Siddaramaiah- Protest –against- Congress office – Raichur