ಕಾಂಗ್ರೆಸ್ ಗೆ ಶ್ರೀನಿವಾಸ್ ಪ್ರಸಾದ್ ಗಿಂತ ನಾನೇ ಮೊದಲು ರಾಜೀನಾಮೆ ನೀಡಬೇಕಿತ್ತು- ಮಾಜಿ ಸಚಿವ ಸತೀಶ್ ಜಾರಕಿಹೊಳಿ….

0
33757
Srinivas Prasad – resign- before -Congress -Former minister Satish jarakiholi

ಬೆಳಗಾವಿ,ಏ,19,2017(www.justkannada.in):  ಕಾಂಗ್ರೆಸ್ ಗೆ ಶ್ರೀನಿವಾಸ್ ಪ್ರಸಾದ್ ಅವರಿಗಿಂತಲೂ ಮೊದಲು ನಾನೇ ರಾಜೀನಾಮೆ ನೀಡಬೇಕಿತ್ತು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.Srinivas Prasad – resign- before -Congress -Former minister Satish jarakiholi

ಬೆಳಗಾವಿ ಜಿಲ್ಲೆಯ ಯಮಕನಮರಡಿ ಕಾರ್ಯಕರ್ತರ ಸಭೆಯಲ್ಲಿ ಇಂದು  ಮಾತನಾಡಿದ  ಸತೀಶ್ ಜಾರಕಿಹೊಳಿ, ಸ್ವಾಭಿಮಾನದ ಕಿಚ್ಚು ಎಲ್ಲರಿಗಿಂತಲೂ ನನಗೆ ಹೆಚ್ಚಿದೆ. ಶ್ರೀನಿವಾಸ್ ಪ್ರಸಾದ್ ಗಿಂತಲೂ ಮೊದಲೇ ನಾನು ರಾಜೀನಾಮೆ ನೀಡಬೇಕಿತ್ತು. ಇದೀಗ ಅಂತಹ ವಾತಾವರಣ ಕಾಂಗ್ರೆಸ್ ನಲ್ಲಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಹೋದರ ಲಖನ್ ಜಾರಕಿಹೊಳಿ ವಿರುದ್ದ ವಾಗ್ದಾಳಿ…..

ಇದೇ ವೇಳೆ  ಸಹೋದರ ಲಖನ್ ಜಾರಕಿಹೊಳಿ ವಿರುದ್ದ ವಾಗ್ದಾಳಿ ನಡೆಸಿದ ಸತೀಶ್ ಜಾರಕಿಹೊಳಿ, ಸಹೋದರ ಲಖನ್ ಜಾರಕಿಹೊಳಿ ಚರಿತ್ರ ತಿಳಿಯಬೇಕಾದ್ರೆ ಗೋಕಾಕ್ ಪಟ್ಟಣದ ಬಾರ್ ಗೆ ಹೋಗಿ ಕುಳಿತುಕೊಳ್ಳಿ ಮದ್ಯ ಸೇವಿಸುವ  ವ್ಯಕ್ತಿಗಳ ಮಾತಿನಲ್ಲಿ  ಎಂತಹ ಚರಿತ್ರೆ ಎಂಬುದು ಗೊತ್ತಾಗುತ್ತೆ ಎಂದು ಕಿಡಿ ಕಾರಿದರು.

Key words: Srinivas Prasad – resign- before -Congress -Former minister Satish jarakiholi