ಪದ್ಮ ಭೂಷಣ ಪುರಸ್ಕಾರಕ್ಕೆ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ಹೆಸರು ಶಿಫಾರಸು

0
2156

ನವದೆಹಲಿ:ಸೆ-25:(www.justkannada.in) ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ಅವರ ಹೆಸರನ್ನು ಪ್ರತಿಷ್ಠಿತ ಪದ್ಮ ಭೂಷಣ ಪುರಸ್ಕಾರಕ್ಕೆ ಕ್ರೀಡಾ ಸಚಿವಾಲಯ ಶಿಫಾರಸು ಮಾಡಿದೆ.

ಸಿಂಧು ಅವರ ಹೆಸರನ್ನು 2017ನೇ ಸಾಲಿನ ಪದ್ಮ ಭೂಷಣ ಪಶಸ್ತಿಗೆ ಶಿಫಾರಸು ಮಾಡಲಾಗಿದೆ. ಈ ವರ್ಷ ಹೆಸರು ಶಿಫಾರಸು ಮಾಡಿದ ಎರಡನೇ ಕ್ರೀಡಾಪಟು ಸಿಂಧು ಆಗಿದ್ದಾರೆ. ಇತ್ತೀಚಿಗೆ ಕ್ರಿಕೆಟಿಗ ಮಹೇಂದ್ರ ಸಿಂಗ್‌ ದೋನಿ ಅವರ ಹೆಸರನ್ನು ಬಿಸಿಸಿಐ ಪದ್ಮ ಭೂಷಣ ಪುರಸ್ಕಾರಕ್ಕೆ ಶಿಫಾರಸು ಮಾಡಿತ್ತು.

ಇತ್ತೀಚೆಗಷ್ಟೇ ಪಿ.ವಿ ಸಿಂಧು ಕೊರಿಯಾ ಓಪನ್ ಸೂಪರ್ ಸರಣಿ ಪ್ರಶಸ್ತಿ ಜಯಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಶಟ್ಲರ್ ಎನಿಸಿಕೊಂಡಿದ್ದರು. ವಿಶ್ವದ ನಂ.2 ಆಟಗಾರ್ತಿಯಾಗಿರುವ ಸಿಂಧು 2015ರ ಮಾರ್ಚ್‌ನಲ್ಲಿ ಭಾರತದ ನಾಲ್ಕನೆ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಪದ್ಮಶ್ರೀಗೆ ಭಾಜನರಾಗಿದ್ದರು.

ಹೈದರಾಬಾದಿನ ಸಿಂಧು ಅವರು 2016 ಚೀನ ಓಪನ್‌ ಸೂಪರ್‌ ಸೀರಿಸ್‌ ಪ್ರೀಮಿಯರ್‌, ಇಂಡಿಯಾ ಓಪನ್‌ ಸೂಪರ್‌ ಸೀರೀಸ್‌ ಗೆದ್ದುಕೊಂಡಿದ್ದಾರೆ. ಕಳೆದ ತಿಂಗಳಲ್ಲಿ ಗ್ಲಾಸ್‌ಗೊ ವಿಶ್ವ ಚಾಂಪ್ಯನ್‌ಶಿಪ್‌ನಲ್ಲಿ ಐತಿಹಾಸಿಕ ರಜತ ಪದಕವನ್ನು ಪಡೆದಿದ್ದ ಸಿಂಧು, ಈ ತಿಂಗಳಲ್ಲಿ ನಡೆದಿದ್ದ ಕೊರಿಯ ಓಪನ್‌ ಸೂಪರ್‌ ಸೀರೀಸ್‌ ಗೆದ್ದು ಅಮೋಘ ಸಾಧನೆಯನ್ನು ದಾಖಲಿಸಿದ್ದಾರೆ.

ಮೂರು ಬಾರಿಯ ಮಕಾವು ಓಪನ್‌ ಚಾಂಪ್ಯನ್‌ ಆಗಿರುವ ಸಿಂಧು ಅವರು ಈ ವರ್ಷ ಲಕ್ನೋದಲ್ಲಿ ನಡೆದಿದ್ದ ಸಯ್ಯದ್‌ ಮೋದಿ ಗ್ರ್ಯಾನ್‌ ಪ್ರೀ ಗೋಲ್ಡ್‌ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿ, ಜನ ಮನ್ನಣೆಗೆ ಪಾತ್ರರಾಗಿದ್ದರು.
Sports ministry,Recommends,P V Sindhu,Padma bhushan
Olympic silver medallist shuttler P.V. Sindhu has been recommended for the prestigious Padma Bhushan, country’s third highest civilian award, by the Sports Ministry here on Monday.