ಬೆಂಗಳೂರಿನಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವ ಅಮಿತ್ ಶಾ ಬಿಜೆಪಿ ಸಿಎಂ ಜೈಲಿಗೆ ಹೊಗಿದ್ದನ್ನ ಮರೆತಿದ್ದಾರೆ-ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕಿಡಿ…

0
595
Speaking - corruption -Amit Shah -forgotten - jailed -KPCC president Parameshwar.

ರಾಯಚೂರು,ಆ,12,2017(www.justkannada.in): ಬೆಂಗಳೂರಿನಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವ ಅಮಿತ್ ಶಾ ಅವರು ತಮ್ಮ ಬಿಜೆಪಿ ಪಕ್ಷದ  ಸಿಎಂ ಜೈಲಿಗೆ ಹೊಗಿದ್ದನ್ನ ಮರೆತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕಿಡಿ ಕಾರಿದರು.Speaking - corruption -Amit Shah -forgotten - jailed -KPCC president Parameshwar.

ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ದೇಶಿಸಿದ, ಪರಮೇಶ್ವರ್ , ತಮ್ಮದೆ ಪಕ್ಷದ ಸಿಎಂ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿರುವುದನ್ನ ಅಮಿತ್ ಶಾ ಮರೆತಿದ್ದಾರೆ. ಅಂಬಾನಿ ಅದಾನಿ ಸಾಲಮನ್ನ ಮಾಡುವ ಸರ್ಕಾರಕ್ಕೆ ರೈತರು ಕಾಣುತ್ತಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ರೆ ಆರ್ಥಿಕ ವ್ಯವಸ್ಥೆ ಹಾಳಾಗುತ್ತೆ ಅಂತಾರೆ. ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಲೂಟಿ ಮಾಡಿದ್ದಾರೆ.ಹೀಗಾಗಿ ಮತ್ತೆ ನಾವೇ ಮುಂದಿನ ಬಾರಿಯೂ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸತ್ಯಕ್ಕೆ ಯಾವಾಗಲೂ ಜಯ ಸಿಗುತ್ತೆ- ಸಚಿವ ಡಿಕೆ ಶಿವಕುಮಾರ್…..

ಇದೇ ವೇಳೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಸತ್ಯಕ್ಕೆ ಯಾವಾಗಲೂ ಜಯವಿದೆ.  ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರಿಗೆ ಅಗೌರವ ತರುವ ಕೆಲಸವನ್ನ ನಾನು ಮಾಡಿಲ್ಲ. ನಾವು ನುಡಿದಂತೆ ನಾವು ನಡೆದಿದ್ದೇವೆ.ನಮಗೆ ಜಯವಿದೆ. ನಾವು ಮತದಾರರಲ್ಲಿ ಮತ ಕೇಳುವ ಶಕ್ತಿ ಹೊಂದಿದ್ದೇವೆ. ಮೋಡ, ಗ್ರಹಣ, ಕಷ್ಟಗಳು ಬರುತ್ತವೆ ಅದಕ್ಕೆಲ್ಲಾ ಚಿಂತೆ ಮಾಡಬಾರದು. ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಹಿತ ಕಾಯುತ್ತದೆ. ರಾಹುಲ್ ಗಾಂಧಿಯನ್ನ ಮುಂದಿನ ಪ್ರಧಾನಿ ಮಾಡಲು ಎಲ್ಲರೂ ಪಣತೊಡಬೇಕಿದೆ ಎಂದರು.

Key words: Speaking – corruption -Amit Shah -forgotten – jailed -KPCC president Parameshwar.