ಸ್ಪೀಕರ್ ಕೋಳಿವಾಡ ತಮ್ಮ ಮಕ್ಕಳ ಹೆಸರಲ್ಲಿ ಕಾನೂನು ಬಾಹಿರವಾಗಿ ನಿವೇಶನ ಪಡೆದಿರುವುದು ಸರಿಯಲ್ಲ- ಜಗದೀಶ್ ಶೆಟ್ಟರ್…

0
395
Speaker –koliwada - got land- illegally -their children - Jagadish Shettar

ಬೆಂಗಳೂರು,ಮಾ,20,2017(www.justkannada.in):  ಸ್ಪೀಕರ್ ಕೋಳಿವಾಡ ಅವರೇ ತಮ್ಮ ಹೆಣ್ಣುಮಕ್ಕಳ ಹೆಸರಲ್ಲಿ ಕಾನೂನು ಬಾಹಿರವಾಗಿ ನಿವೇಶನ ಪಡೆದಿರುವುದು ಸರಿಯಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅಸಮಧಾನ ವ್ಯಕ್ತಪಡಿಸಿದ್ದಾರೆ

ವಿಧಾನಸಭೆಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ವಿಧಾನ ಮಂಡಲ  ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಸದಸ್ಯರೂ ಅಲ್ಲ. ಒಂದು ವೇಳೆ ಕಾನೂನು ತಿದ್ದುಪಡಿ ಆಗಿದ್ದರೂ ನೈತಿಕತೆ ಪ್ರಶ್ನೆ ಎದುರಾಗುತ್ತದೆ.ಈ ಸಂಬಂಧ ಕೋಳಿವಾಡ ಅವರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಆರೋಪ ಬಂದ ಕೂಡಲೇ ಸ್ಥಾನದಿಂದ ಕೆಳಗಿಳಿಯಬೇಕು ಎಂದೇನಿಲ್ಲ- ಸಚಿವ ರಮೇಶ್ ಕುಮಾರ್…

ಸ್ಪೀಕರ್ ಕೆ.ಬಿ.ಕೋಳಿವಾಡ ಪುತ್ರಿಯರಿಗೆ ನಿವೇಶನ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ರಮೇಶ್ ಕುಮಾರ್, ಸ್ಪೀಕರ್ ವಿರುದ್ಧ ಏನು ದೂರು ಬಂದಿದೆ ಎಂಬುದು ನನಗೆ ಗೊತ್ತಿಲ್ಲ. ಆರೋಪ ಬಂದ ಕೂಡಲೇ ಸ್ಥಾನದಿಂದ ಕೆಳಗೀಳಿಯಬೇಕು ಎಂದು ಏನೂ ಇಲ್ಲ.ಸ್ಪೀಕರ್ ಮೇಲೆ ಯಾವುದೇ ಆರೋಪಗಳು ಬರಬಾರದು.ಸ್ಪೀಕರ್ ಸ್ಥಾನ ಬಹಳ ಪವಿತ್ರವಾದುದ್ದು ಎಂದು ಹೇಳಿದರು.

Key words:  Speaker –koliwada – got land- illegally -their children – Jagadish Shettar