ಅನುಷ್ಕಾ ಬಳಿಕ ಹಸೆಮಣೆ ಏರಲು ಸೋನಂ ಕಪೂರ್ ರೆಡಿ !

0
281

ಮುಂಬೈ, ಜನವರಿ 12 (www.justkannada.in): ಅನುಷ್ಕಾ ಬಳಿಕ ಬಿಟೌನ್‌’ನ ಮತ್ತೊಬ್ಬ ಸುಂದರಿ ಸೋನಂ ಕಪೂರ್ ಮದುವೆ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಸ್ವತಃ ಸೋನಂ ಜೀವ ನೀಡಿದ್ದು, ‘ಎಸ್ ಐ ವಿಲ್ ಮ್ಯಾರಿ ವಿಥ್ ಆನಂದ್’ ಎಂದಿದ್ದಾರೆ.

ಕಳೆದ ಹತ್ತು ವರ್ಷ ಸಿನಿ ಪಯಣದಲ್ಲಿ ಎಲ್ಲಿಯೂ ನಾನು ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಹೇಳಿಕೊಂಡಿಲ್ಲ. ಅದು ನನಗೆ ಇಷ್ಟವೂ ಇಲ್ಲ ಎಂದು ತಮ್ಮ ಬಗ್ಗೆ ಹೇಳಿಕೊಂಡಿದ್ದ ಸೋನಂ ಈಗ ಮದುವೆ ವಿಚಾರವೂ ಕೂಡ ಹೆಚ್ಚು ವೈರಲ್ ಆಗಬಾರದು ಎನ್ನುವ ಉದ್ದೇಶಕ್ಕೆ ಇರುವುದನ್ನು ನೇರವಾಗಿ ಹೇಳಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಇದೆ ಏಪ್ರಿಲ್‌ನಲ್ಲಿ ಸೋನಂ ಆನಂದ್ ಅವರ ಕೈ ಹಿಡಿಯಲಿದ್ದಾರೆ. ಅದು ರಾಜಸ್ಥಾನದಲ್ಲಿ ಎಂದು ಹೇಳಿಕೊಂಡಿದ್ದಾರೆ ಸೋನಂ.

ಯಾರೆಲ್ಲಾ ಬಂದು ಹರಸಲಿದ್ದಾರೆ ಎನ್ನುವದಕ್ಕೆ ಈಗ ಸಿಕ್ಕಿರುವ ಉತ್ತರ, ಮದುವೆಗೆ ಆತ್ಮೀಯರಾದ ಕೇವಲ 300 ಮಂದಿ ಸೇರಲಿದ್ದಾರಂತೆ. ಇದೆಲ್ಲವನ್ನೂ ಬಿಟ್ಟು ಬೇರೆ ಸಂಗತಿಗಳೆಲ್ಲವೂ ಮುಂದೆ ನಾವೇ ತಿಳಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ ಸೋನಂ.