ಸ್ಮಾರ್ಟ್ ಕಾರ್ಡ್ ಗಳ ಕೊರತೆ ಹಿನ್ನಲೆ: ಆರ್ ಸಿ ಕಾರ್ಡ್, ಡಿ ಎಲ್ ಪೂರೈಕೆ ವಿಳಂಬ; ಸಾರ್ವಜನಿಕರ ಪರದಾಟ

0
401

ಬೆಂಗಳುರು:ಏ-21:(www.justkannada.in)ವಾಹನ ನೋಂದಣಿ ಪ್ರಮಾಣ ಪತ್ರ (ಆರ್ ಸಿ ಕಾರ್ಡ್) ಮತ್ತು ಚಾಲನಾ ಪರವಾನಗಿ ಪತ್ರ(ಡಿ ಎಲ್) ಗಳ ಸೇವಾ ಪೂರೈಕೆದಾರರ ಆಂತರಿಕ ಸಮಸ್ಯೆಗಳಿಂದಾಗಿ ರಾಜ್ಯಾದ್ಯಂತ ವಾಹನ ಸವಾರರಿಗೆ ಸ್ಮಾರ್ಟ್ ಕಾರ್ಡ್ ಗಳ ಪೂರೈಕೆಯಲ್ಲಿ ಸಮಸ್ಯೆಗಳು ಉಂಟಾಗಿವೆ. ಆರ್ ಸಿ ಕಾರ್ಡ್ ಹಾಗೂ ಡಿಎಲ್ ಪೂರೈಕೆಯಲ್ಲಿ ವಿಳಂಬ ಉಂಟಾಗುತ್ತಿದ್ದು, ವಾಹನ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಾಹನ ನೋಂಡಣಿ ಪ್ರಮಾಣ ಪತ್ರ ಹಾಗೂ ಚಾಲನಾ ಪರವಾನಿಗೆ ಪೂರೈಕೆದಾರರ ನಡುವನ ಆತಂರಿಕ ಸಮಸ್ಯೆಯಿಂದಾಗಿ ಪ್ರಸ್ತುತ ರಾಜ್ಯದಲ್ಲಿ ಕಾರ್ಡ್ ಪೂರೈಕೆ ಸೇವೆ ಸ್ಥಗಿತಗೊಂಡಿದೆ. ಸಾರಿಗೆ ಇಲಾಖೆ ಒಂದು ತಿಂಗಳಲ್ಲಿ ನಾಲ್ಕು ಲಕ್ಷ ಆರ್ ಸಿ ಬುಕ್ ಹಾಗೂ ಡಿಲ್ ಪೂರೈಕೆ ಮಾಡುತ್ತಿದ್ದು, ಪ್ರಸ್ತುತ ರಾಜ್ಯದಲ್ಲಿ ಒಂದು ಲಕ್ಷ ಸ್ಮಾರ್ಟ್ ಕಾರ್ಡ್ ಗಳ ಕೊರತೆ ಉಂಟಾಗಿದೆ. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಪ್ರಮುಖ ಸೇವಾ ಪೂರೈಕೆದಾರರೈಗೆ ಎಚ್ಚರಿಕೆ ನೀಡಿದ್ದು, ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫವಾದಲ್ಲಿ ಒಪ್ಪಂದವನ್ನು ರದ್ದುಗೊಳಿಸುವ ಖಡಕ್ ಸಂದೇಶ ರವಾನಿಸಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಈಗಾಗಲೇ ಸಮಸ್ಯೆ ಕುರಿತು ಕಮಿಷನರ್ ಜತೆ ಮಾತನಾಡಲಾಗಿದೆ. ಸಮಸ್ಯೆಯನ್ನು ಪರಿಹರಿಸಲು ನಿರ್ದೇಶನ ನೀಡಲಾಗಿದೆ. ಸೇವಾ ಪೂರೈಕೆದಾರರ ಆಂತರಿಕ ವಿವಾದಗಳಿಂದಾಗಿ ಕಾರ್ಡುಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ.ಈಗಾಗಲೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡ ಕಂಪನಿಗೆ ನೋಟೀಸ್ ನೀಡಲಾಗಿದ್ದು, ಅವರು ಒಪ್ಪಂದವನ್ನು ಉಲ್ಲಂಘಿಸಿದರೆ, ಒಪ್ಪಂದವನ್ನು ರದ್ದುಗೊಳಿಸುವುದಾಗಿ ತಿಳಿಸಲಾಗಿದೆ ಎಂದಿದ್ದಾರೆ.

ಆರ್ ಟಿಒ ಕಛೇರಿಗಳಲ್ಲಿ ತಿಂಗಳಿಗೆ ನಾಲ್ಕು ಲಕ್ಷ ಕಾರ್ಡ್ ಗಳ ಬೇಡಿಕೆಯಿರುತ್ತದೆ. ಕಳೆದ ಎರಡು ತಿಂಗಳುಗಳಿಂದ ಕಾರ್ಡ್ ಗಳ ಸರಬರಾಜು ಮಾಡದೇ ಇರುವುದರಿಂದಾಗಿ ವಾಹನ ಸವಾರರು ತಮ್ಮ ವಾಹನ ನೋಂದಣಿ ಮಾಡಿಸಿಕೊಲ್ಳಲು ಹಾಗೂ ಡಿಎಲ್ ಗಳನ್ನು ಪಡೆದುಕೊಳ್ಳಲಾರದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿಯಮದ ಪ್ರಕಾರ ಆರ್ ಟಿ ಒಗಳು ಒಂದು ತಿಂಗಳಲ್ಲಿ ಕಾರ್ಡ್ ಗಳನ್ನು ಪೂರೈಕೆ ಮಾಡಬೇಕು.

2009ರಲ್ಲಿ ಡಿ ಎಲ್ ಮತ್ತು ಆರ್ ಸಿ ಕಾರ್ಡ್ ಗಳ ಮೂಲಕ ಸ್ಮಾರ್ಟ್ ಕಾರ್ಡ್ ಗಳನ್ನು ಪರಿಚಯಿಸಿದಾಗ ರಾಜ್ಯ ಸಾರಿಗೆ ಇಲಾಖೆ ಕಾರ್ಡ್ ಗಳ ಪೂರೈಕೆಯಲ್ಲಿ ಮುಂಚೂಣಿಸ್ಥಾನದಲ್ಲಿತ್ತು. ರಾಜ್ಯದಲ್ಲಿ ಈವರೆಗೆ 1.20 ಕೋಟಿ ಅರ್ ಸಿ ಕಾರ್ಡ್ ಹಾಗೂ 1.10 ಕೋಟಿ ಡಿ ಎಲ್ ಗಳನ್ನು ಇಂದಿನ ವರೆಗೆ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ನಗರವೊಂದರಲ್ಲೇ ಪ್ರತಿದಿನ 1000ಕ್ಕೂ ಹೆಚ್ಚು ವಾಹನಗಳು ನೊಂದಾಯಿಸ್ಪಲ್ಪಡುತ್ತವೆ. ಅಲ್ಲದೇ 1000-1500 ಜನರು ದಿ ಎಲ್ ಗಳಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಆದರೆ ಈಗ ಪಾಲುದಾರರು ಹಾಗೂ ಪೂರೈಕೆದಾರರ ನಡುವಿನ ಆಂತರಿಕ ಕಲಹದಿಂದಾಗಿ ಸ್ಮಾರ್ಟ್ ಕಾರ್ಡ್ ಗಳ ಪೂರೈಕೆಯಲ್ಲಿ ವಿಳಂಬ ಧೋರಣೆ ಉಂಟಾಗುತ್ತಿದ್ದು, ಸಾರ್ವಜನಿಕರು ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರ್ ಟಿ ಒ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

smart cards,short supply,problem for people,receiving RC and DL

Supply stopped due to internal problems of service provider. Transport minister says action will be taken if contract is violated

An acute shortage of smart cards across the state due to an internal dispute plaguing the service provider supplying those could pose a problem for people in receiving their vehicle registration certificates (RC) and drivers’ licences (DL).