ತೆಲಂಗಾಣ,ಫೆ.13,2018(www.justkannada.in): ರಾತ್ರಿ ವೇಳೆ ಮನೆಯ ಹೊರಗೆ ಮಂಚದ ಮೇಲೆ ಮಲಗಿದ್ದ ವೇಳೆ ಮಂಚದ ಕೆಳಗೆ ಬಾಂಬು ಇಟ್ಟು ಸ್ಫೋಟಿಸಿ ಕಾಂಗ್ರೆಸ್ ಮುಖಂಡನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ. slept-Bomb- down-couch-death

ಇಲ್ಲಿ ನಾಗಾರ್ಜುನ ಪೇಟೆ ಗ್ರಾಮದಲ್ಲಿ ನಡೆದಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡ ಧರ್ಮನಾಯಕ ಹತ್ಯೆಯಾದವರು. ಧರ್ಮನಾಯಕ್ ಮನೆಯ ಹೊರಗೆ ಮಂಚದ ಮೇಲೆ ಮಲಗಿದ್ದಾಗ ಯಾರೋ ದುಷ್ಕರ್ಮಿಗಳು ಮಂಚದ ಕೆಳಗೆ ಬಾಂಬ್ ಇಟ್ಟು ಸ್ಪೋಟಿಸಿದ್ದಾರೆ. ಬಾಂಬು ಸ್ಪೋಟದ ತೀವ್ರತೆಗೆ ಧರ್ಮನಾಯಕರ ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿದ್ದವು. slept-Bomb- down-couch-death

ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ಧರ್ಮನಾಯಕ ಸರಪಂಚ್ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದರು. ಹೀಗಾಗಿ ಹತ್ಯೆಗೆ ಹಳೆ ದ್ವೇಷಯೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಬಾಂಬ್ ಸ್ಪೋಟ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

key words : slept-Bomb- down-couch-death