ಬೆಂಗಳೂರು, ಫೆ.13, 2018 : (www.justkannada.in news ) ನಾನು ದೇಶದ ಆರನೇ ಶ್ರೀಮಂತ ಮುಖ್ಯಮಂತ್ರಿ, 13 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದೇನೆ ಎಂದು ಸಮೀಕ್ಷೆಯೊಂದು ಹೇಳಿದೆ. ಈ ರೀತಿ ಹೇಳಿದ್ದು ಖುದ್ದು ಸಿಎಂ ಸಿದ್ದರಾಮಯ್ಯ .
ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮಾತನಾಡಿ ಹೇಳಿದಿಷ್ಟು….

siddaramaiah-cm-karnataka-congress-richest-cm-modi

ನಾನು ದೇಶದ ಆರನೇ ಶ್ರೀಮಂತ ಮುಖ್ಯಮಂತ್ರಿ, 13 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದೇನೆ ಎಂದು ಸಮೀಕ್ಷೆಯೊಂದು ಹೇಳಿದೆ. ಅದು ನಮ್ಮ ಅವಿಭಕ್ತ ಕುಟುಂಬದ ಆಸ್ತಿಯ ಲೆಕ್ಕ. ಕಳೆದ ಚುನಾವಣೆಯಲ್ಲಿ ಅವಿಭಕ್ತ ಕುಟುಂಬದ ಒಟ್ಟು ಆಸ್ತಿಯನ್ನು ಘೋಷಿಸಿದ್ದೆ. ಅಣ್ಣ, ತಮ್ಮಂದಿರ ಎಲ್ಲಾ ಅಸ್ತಿಯ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿತ್ತು.
ನನ್ನ ಅಣ್ಣನ ನಿಧನದ ಬಳಿಕ ನಾನೇ ಮನೆಯ ಯಜನಮಾನನಾಗಿದ್ದೆ. ಈಗ ಕುಟುಂಬದ ಆಸ್ತಿಯನ್ನ ವಿಭಜಿಸಲಾಗಿದೆ.‌ ಜೊತೆಗೆ ಆರೂವರೆ ಕೋಟಿ ಜನರು ನನ್ನ ಆಸ್ತಿಯಾಗಿದ್ದಾರೆ.

ಅರ್ಜಿ ವಾಪಸ್ :

ಮಹಾದಾಯಿ ವಿಚಾರದಲ್ಲಿ ಗೋವಾ ಸರ್ಕಾರ ನ್ಯಾಯಾಂಗ ನಿಂದನೆ ಅರ್ಜಿ ವಾಪಸ್ ಪಡೆದಿದೆ. ನಾವು ಯಾವುದೇ ಕಾಮಗಾರಿ ನಡೆಸಿಲ್ಲ, ನ್ಯಾಯಾಂಗ ನಿಂದನೆ ಆಗಿಲ್ಲ ಎಂದು ನಾವು ಮೊದಲೇ ಹೇಳಿದ್ದರೂ ಕೇಳಲಿಲ್ಲ. ಈಗ ಅವರಿಗೆ ಗೊತ್ತಾಗಿ ಅವರಾಗಿಯೇ ನ್ಯಾಯಾಂಗ ನಿಂದನೆ ಅರ್ಜಿ ವಾಪಸ್ ಪಡೆದಿದ್ದಾರೆ.

ಪ್ರಧಾನಿಗೆ ವೆಲ್ ಕಂ :

siddaramaiah-cm-karnataka-congress-richest-cm-modi

ಪ್ರಧಾನಿ ನರೇಂದ್ರ ಮೋದಿ ಅವರು ಒಂದಲ್ಲ ನೂರು ಬಾರಿ ರಾಜ್ಯಕ್ಕೆ ಬರಲಿ.‌ ಅದರಿಂದ‌ ನಮಗೇನೂ ತೊಂದರೆ ಇಲ್ಲ. ಅವರದ್ದು ಒಂದು ರಾಜಕೀಯ ಪಕ್ಷ. ಹೀಗಾಗಿ ಬರುತ್ತಾರೆ.
ಕಳೆದ ಬಾರಿ ಅವರು ಬೆಂಗಳೂರಿಗೆ ಬಂದಾಗ ನಮ್ಮದು ಹತ್ತು ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿದ್ದರು. ಮುಂದಿನ ಬಾರಿ ಬರುವಾಗ ಅದಕ್ಕೆ ದಾಖಲೆ ತರುವರಂತೆ. ಮೊದಲು ದಾಖಲೆ ಬಿಡುಗಡೆ ಮಾಡಲಿ ನೋಡೋಣ.
ನಮ್ಮ ಸರ್ಕಾರದಲ್ಲಿ ಯಾವುದೇ ಕಮಿಷನ್ ವ್ಯವಹಾರ ಇಲ್ಲ. ಅಂತಹ ವ್ಯವಹಾರ ಏನಾದರೂ ನಡೆದಿದ್ದರೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಆ ಸರ್ಕಾರ ನೂರು ಪರ್ಸೆಂಟ್ ಕಮಿಷನ್ ಸರ್ಕಾರವಾಗಿತ್ತು.

Tags : siddaramaiah-cm-karnataka-congress-richest-cm-modi