ಬೆಂಗಳೂರು, ಜೂನ್ 06 (www.justkannada.in): ಅವಧಿ ಬ್ಲಾಗ್ ಸಹಕಾರದಲ್ಲಿ ‘ಶ್ರೀಪಾದ ಭಟ್ ರಂಗ ಉತ್ಸವ’ವನ್ನು ಬೆಂಗಳೂರಿನ ರಂಗಶಂಕರದಲ್ಲಿ ಜೂನ್ 15ರಂದು ಆಯೋಜಿಸಲಾಗಿದೆ.

ಅಂದು ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಿರಿ ಪದ ಕೃತಿ ಹಾಗೂ ಸಿರಿ ಪದ ರಂಗಗೀತೆಗಳ ಸಿಡಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ, ನ್ಯಾ.ಎಚ್.ಎನ್.ನಾಗಮೋಹನ ದಾಸ್, ಎನ್.ಆರ್.ವಿಶುಕುಮಾರ್, ಲಹರಿ ವೇಲು, ಮಂಡ್ಯ ರಮೇಶ್, ಸುಧಾ ಆಡುಕಳ ಇತರರು ಪಾಲ್ಗೊಳ್ಳಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದ ಬಳಿಕ 7.30ಕ್ಕೆ ರಥಬೀದಿ ಗೆಳೆಯರು ಉಡುಪಿ ಇವರಿಂದ ‘ಮಿಸ್ಟೇಕ್’ ನಾಟಕ ಪ್ರದರ್ಶನ ಇರಲಿದೆ. ಜೂನ್.16ರಂದು ಮೈಸೂರಿನ ನಟನ ತಂಡದಿಂದ ‘ಕೆಂಪು ಕಣಗಿಲೆ’ ನಾಟಕ ಪ್ರದರ್ಶನ ಇರಲಿದೆ. ಜೂನ್ 17ರಂದು ಶನಿವಾರ ಮಧ್ಯಾಹ್ನ 3.30ಕ್ಕೆ ಕೊಡವೂರಿನ ನೃತ್ಯ ನಿಕೇತನ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.