‘ಮಜಾ ಟಾಕೀಸ್’ನಲ್ಲಿ ಹಾಡಿ ಕುಣಿದ ಶೋಭಾ ಕರಂದ್ಲಾಜೆ!

0
1946

ಬೆಂಗಳೂರು, ಮಾರ್ಚ್ 11 (www.justkannada.in): ಮಾಜಿ ಸಚಿವೆ, ಸಂಸದೆ ಶೋಭಾ ಕರಂದ್ಲಾಜೆ ‘ಮಜಾ ಟಾಕೀಸ್’ನಲ್ಲಿ ಹಾಡಿ, ಕುಣಿದು ವೈಯಕ್ತಿಕ ಜೀವನ, ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

ಸೃಜನ್ ಲೋಕೇಶ್ ನಡೆಸಿಕೊಡುವ ‘ಮಜಾ ಟಾಕೀಸ್’ ನಲ್ಲಿ ಈ ವಾರದ ‘ಮಹಿಳಾ ದಿನಾಚರಣೆ’ಯ ವಿಶೇಷವಾಗಿ ಚಿತ್ರೀಕರಿಸಿರುವ ಸಂಚಿಕೆಗೆ ವಿಶೇಷ ಅತಿಥಿ ಆಗಿ ಶೋಭಾ ಕರಂದ್ಲಾಜೆ ಭಾಗವಹಿಸಿದ್ದಾರೆ.  ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆಯಾಗಿದ್ದ, ಹಾಲಿ ಸಂಸತ್ ಸದಸ್ಯೆ ಆಗಿರುವ ಶೋಭಾ ಕರಂದ್ಲಾಜೆ ‘ಮಜಾ ಟಾಕೀಸ್’ನಲ್ಲಿ ಭಾಗವಹಿಸಿದ್ದಾರೆ.

ಶೋಭಾ ಕರಂದ್ಲಾಜೆಯ ಹಾಸ್ಯದ ಮುಖ ಅನಾವರಣ ಸದಾ ಗಂಭೀರವಾಗಿರುವ ಶೋಭಾ ಕರಂದ್ಲಾಜೆಯವರ ಹಾಸ್ಯದ ಮುಖ ನೋಡಿದವರು ಕಡಿಮೆ. ಅವರ ಹಾಸ್ಯದ ಮೊಗವನ್ನು ಕನ್ನಡದ ಜನತೆಗೆ ಪರಿಚಯಿಸಲಿದೆ ‘ಮಜಾ ಟಾಕೀಸ್’.