ಕಾರಾಂತರು ನನ್ನ ಅಜ್ಜ ಹಾಗೂ ಆತ್ಮೀಯರು: ಅವರ ಹೆಸರಲ್ಲಿ ಪ್ರಶಸ್ತಿ ಸ್ವೀಕರಿಸುವುದು ನನಗೆ ಹೆಮ್ಮೆಯ ವಿಚಾರ- ನಟ ಪ್ರಕಾಶ್ ರೈ…

0
1840
shivarama karantha-my grandfather -receive - award -Actor Prakash Rai

ಬೆಂಗಳೂರು,ಅ,10,2017(www.justkannada.in): ಪತ್ರಕರ್ತೆ  ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ಹೇಳಿಕೆ ನೀಡಿದ ಹಿನ್ನೆಲೆ ಶಿವರಾಮಕಾರಂತ ಪ್ರಶಸ್ತಿ ನೀಡಲು ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು  ಬಹುಭಾಷಾ ನಟ ಪ್ರಕಾಶ್ ರೈ  ಪ್ರತಿಕ್ರಿಯೆ ನೀಡಿದ್ದಾರೆ. shivarama karantha-my grandfather -receive - award -Actor Prakash Rai

ಪ್ರಶಸ್ತಿ ಸ್ವೀಕರಿಸಲು ಆಗಮಿಸಿರುವ ನಟ ಪ್ರಕಾಶ್ ರೈ ಮಾಧ್ಯಮಗಳ ಜತೆ ಮಾತನಾಡಿ, ವಿರೋಧ ಮಾಡುವವರು ವಿರೋಧ ಮಾಡ್ತಾರೆ. ಪ್ರೀತಿ ಮಾಡುವವರು ಪ್ರೀತಿ ಮಾಡುತ್ತಾರೆ. ಅ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.

ಶಿವರಾಮ ಕಾರಂತರು ನನ್ನ ಅಜ್ಜನಂತೆ. ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುವುದು ನನಗೆ ಹೆಮ್ಮೆಯ ಸಂಗತಿ. ಹೀಗಾಗಿ ಪ್ರಶಸ್ತಿ ಸ್ವೀಕರಿಸಲು ಬಂದಿದ್ದೇನೆ ಎಂದರು.

ಶಿವರಾಮ ಕಾರಂತರ ಜನ್ಮದಿನವಾದ ಇಂದು ಪ್ರಕಾಶ್ ರೈಗೆ  ಕಾರಾಂತರ ಹುಟ್ಟೂರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಆದರೆ ಪ್ರಧಾನಿ ಮೋದಿ ವಿರುದ್ಧ  ಕಿಡಿಕಾರಿದ್ದ ನಟ ಪ್ರಕಾಶ್ ರೈ  ಅವರಿಗೆ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಬಿಜೆಪಿ ನಾಯಕರು ಬಹಿಷ್ಕಾರ ಹಾಕಿದ್ದಾರೆ.

Key words: shivarama karantha-my grandfather -receive – award -Actor Prakash Rai.