ವಿಲನ್’ನಲ್ಲಿ ಹತ್ತು ಹೀರೋಹಿನ್ ಜೊತೆ ಶಿವಣ್ಣ ಸ್ಪೆಪ್ಸ್ !

0
381

ಬೆಂಗಳೂರು, ಜನವರಿ 11 (www.justkannada.in): ದ ವಿಲನ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಸುದೀಪ್ ಪರಿಚಯದ ಹಾಡನ್ನು ವಿಭಿನ್ನವಾಗಿ ತೋರಿಸಲು ನಿರ್ದೇಶಕ ಪ್ರೇಮ್ ಯೋಚಿಸುತ್ತಿದ್ದಾರೆ.

ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ರೀತಿಯಲ್ಲಿ ಕನ್ನಡದಲ್ಲಿ ಶಿವಣ್ಣ ಕೂಡ ಸ್ವಲ್ಪ ಭಿನ್ನವಾಗಿ ಇಲ್ಲಿ ಸಿನಿಮಾದಲ್ಲಿ ಎಂಟ್ರಿ ಕೊಡಲಿದ್ದಾರೆ. ಇಂಟ್ರೊಡಕ್ಷನ್ ಹಾಡಿನಲ್ಲಿ ಅವರು ಇಲ್ಲಿ ಸ್ಯಾಂಡಲ್ ವುಡ್ ನ ಆರು ಮಂದಿ ನಾಯಕಿಯರೊಂದಿಗೆ ಹೆಜ್ಜೆ ಹಾಕಲಿದ್ದಾರೆ.

ಸುದೀಪ್ ಅವರ ಪರಿಚಯದ ಹಾಡು ಬಹಳ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಚಿತ್ರದಲ್ಲಿ ಶಿವರಾಜ್ ಕುಮಾರ್ ಪ್ರವೇಶದ ಹಾಡನ್ನು ಕೂಡ ವಿಭಿನ್ನವಾಗಿ ತೋರಿಸಲು ಮುಂದಾಗಿದ್ದಾರೆ. ಅದಕ್ಕಾಗಿ ನಿರ್ದೇಶಕ ಪ್ರೇಮ್ ಹಲವು ನಟಿಯರನ್ನು ಸಂಪರ್ಕಿಸುತ್ತಿದ್ದು, ಸದ್ಯದಲ್ಲಿಯೇ ತೀರ್ಮಾನ ಮಾಡಲಿದ್ದಾರೆ.

ಇನ್ನೊಂದೆಡೆ ಇದೇ ಸಂಕ್ರಾಂತಿಗೆ ಚಿತ್ರದ ಟೀಸರ್ ನ್ನು ಬಿಡುಗಡೆ ಮಾಡುವ ಆಲೋಚನೆಯಲ್ಲಿ ಶಿವಣ್ಣ ಇದ್ದಾರೆ. ಸಿ.ಆರ್.ಮನೋಹರ್ ನಿರ್ಮಾಣದ ಭಾರೀ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ವಿಲನ್ ಚಿತ್ರದಲ್ಲಿ ಅದ್ದೂರಿ ತಾರಾಗಣವಿದೆ. ಬಾಲಿವುಡ್ ನ ಮಿಥುನ್ ಚಕ್ರವರ್ತಿ, ತೆಲುಗು ನಟ ಶ್ರೀಕಾಂತ್, ಶ್ರುತಿ ಹರಿಹರನ್ ಮತ್ತು ತಿಲಕ್ ಕೂಡ ನಟಿಸುತ್ತಿದ್ದಾರೆ.