ಚೆನ್ನೈ ಫೆಬ್ರವರಿ 13 (www.justkannada.in): ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವುದು ನಿಜವಾದ ಗೌರವವಾದರೇ, ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನೇತೃತ್ವದಲ್ಲಿ ಆಡುವ ಯೋಚನೆಯೇ ನನಗೆ ರೋಮಾಂಚನವನ್ನು ಉಂಟು ಮಾಡುತ್ತಿದೆ ಎಂದು ಮಾಜಿ ಆಸ್ಟ್ರೇಲಿಯಾ ಆಟಗಾರ ಶೇನ್ ವಾಟ್ಸನ್ ಹೇಳಿದ್ದಾರೆ.

ರಾಜಸ್ತಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದ ಶೇನ್ ವಾಟ್ಸನ್ ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ. ಇನ್ನು ಐಪಿಎಲ್ 11 ಆವೃತ್ತಿಯಲ್ಲಿ ರಾಜಸ್ತಾನಕ್ಕೆ ದೊಡ್ಡ ಪ್ರತಿಸ್ಪರ್ಧಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಹ ಒಂದಾಗಿದ್ದು ಇದು ಆರಂಭದಲ್ಲಿ ಸ್ವಲ್ಪ ವಿಚಿತ್ರ ಎಂದು ಹೇಳಿದ್ದಾರೆ.

36 ವರ್ಷದ ಶೇನ್ ವಾಟ್ಸನ್ 2016ರ ಮಾರ್ಚ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಪ್ರತಿಯೊಂದು ಪಂದ್ಯದಿಂದಲೂ ಪ್ರೇರಣೆ ಪಡೆಯುತ್ತೇನೆ ಎಂದು ಹೇಳಿದ್ದಾರೆ.