ಮಂಡ್ಯದಲ್ಲಿ ರಾಷ್ಟಧ್ವಜಕ್ಕೆ ಅಪಮಾನ; ಸಾರ್ವಜನಿಕರು ಮಾಹಿತಿ ನೀಡಿದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು…

0
550
shame-national-flag-reserve-mandya

ಮಂಡ್ಯ,ಜೂ,19,2017(www.justkannada.in):   ಹರಿದ ರಾಷ್ಟ್ರಧ್ವಜವನ್ನು ಹಾರಿಸಿ ಈ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.shame-national-flag-reserve-mandya

ಮಂಡ್ಯ‌ ಜಿಲ್ಲೆ ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮ ಪಂಚಾಯತ್ ನಲ್ಲಿ ಈ ಘಟನೆ ನಡೆದಿದೆ. ಕೆನ್ನಾಳು ಗ್ರಾಮ ಪಂಚಾಯತ್  ಪಾಂಡವಪುರ ರೈಲ್ವೆ ನಿಲ್ದಾಣದ ಸಮೀಪದಲ್ಲಿದೆ. ಹರಿದ ರಾಷ್ಟ್ರ ಧ್ವಜ  ಹಾರಾಡುತ್ತಿದ್ದರೂ ಅದನ್ನು ಸರಿಪಡಿಸದೆ ಪಿಡಿಓ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಹರಿದ ರಾಷ್ಟ್ರಧ್ವಜ ಹಾರುತ್ತಿರುವುದನ್ನು ನೋಡಿ ಸಾರ್ವಜನಿಕರೂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

 


Key words: shame –national flag-reserve – Mandya.