ಸೇಂಟ್ ಮೊರಿಟ್ಜ್, ಫೆಬ್ರವರಿ 12 (www.justkannada.in): ಭಾರತದ ತಿರಂಗ ಧ್ವಜಕ್ಕೆ ಗೌರವ ನೀಡುವ ಮೂಲಕ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮತ್ತೊಮ್ಮೆ ಸಾವಿರಾರು ಭಾರತೀಯ ಹೃದಯ ಗೆದ್ದಿದ್ದಾರೆ.

ಸ್ವಿಟ್ಜರ್’ಲ್ಯಾಂಡ್’ನ ಸೈಂಟ್ ಮೊರಿಟ್ಜ್ ನಗರದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿ ಬಳಿಕ ಅಭಿಮಾನಿಯೊಬ್ಬರ ಜೊತೆ ಫೋಟೋಗೆ ಪೋಸ್ ನೀಡುವ ವೇಳೆ ಅಫ್ರಿದಿ ಭಾರತದ ಧ್ವಜಕ್ಕೆ ಗೌರವ ಸೂಚಿಸಿದ್ದಾರೆ. ಇದಕ್ಕೆ ಭಾರೀ ಪ್ರಶಂಸೆಗಳು ವ್ಯಕ್ತವಾಗತೊಡಗಿವೆ.

ಫೆ.8 ರಂದು ಸೈಂಟ್ ಮೊರಿಟ್ಜ್ ನಗರದ ಸ್ಕಿ ರಿಸಾರ್ಟ್ ನಲ್ಲಿ ಕ್ರಿಕೆಟ್ ಕ್ಷೇತ್ರದ ದಿಗ್ಗಜರಾದ ವಿರೇಂದ್ರ ಸೆಹ್ವಾಸ್, ಆಸ್ಟ್ರೇಲಿಯಾಗ ಮೈಕ್ ಹಸ್ಸಿ, ಪಾಕಿಸ್ತಾನಾದ ಶೊಯೆಬ್ ಅಖ್ತರ್ ಹಾಗೂ ಶ್ರೀಲಂಕಾದ ಮಹೇಲಾ ಜಯವರ್ಧನೆ ಸೇರಿದಂತೆ ಹಲವು ಕ್ರಿಕೆಟಿಗರು ಟಿ.20 ಪಂದ್ಯವೊಂದರಲ್ಲಿ ಭಾಗವಹಿಸಿದ್ದರು.