(S)EX- PRESS ಬೋಗಿಯೊಳಗೆ ಕಾಮದಾಟ : ನಾಲ್ವರ ಬಂಧನ…!
ಮೈಸೂರು : ರೈಲ್ವೆ ಬೋಗಿಯೊಳಗೆ ಕಾಮದಾಟ ಆಡುತ್ತಿದ್ದ ಎರಡು ಜೋಡಿಗಳು ಇದೀಗ ರೈಲ್ವೆ ಪೊಲೀಸರ ಅತಿಥಿಗಳಾದ ಘಟನೆ ನಡೆದಿದೆ. ತಿರುಪತಿ ಎಕ್ಸ್ ಪ್ರೆಸ್ ರೈಲಿನ ವಿಐಪಿ ಬೋಗಿಯಲ್ಲೇ ಈ ಘಟನೆ ನಡೆದಿರುವುದು. ಈ ಸಂಬಂಧ ಇಬ್ಬರು ಯುವಕರು ಹಾಗೂ ಇಬ್ಬರು ಯುವತಿಯರನ್ನು ಬಂಧಿಸಲಾಗಿದೆ.
ಮೈಸೂರಿನಿಂದ ತೆರಳುವ ತಿರುಪತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ರೀತಿ ಕಾಮದಾಟ ನಡೆಯುತ್ತಿದೆ ಎಂಬ ಬಗ್ಗೆ ರೈಲ್ವೆ ಪೊಲೀಸರಿಗೆ ದೂರು ಬಂದಿತ್ತು.ಈ ಹಿನ್ನೆಲೆಯಲ್ಲಿ ಮಾಹಿತಿಯನ್ನಾಧರಿಸಿದ ಪೊಲೀಸರು ಇಂದು ದಾಳಿ ನಡೆಸಿದರು. ನಂಜನಗೂಡು ಸಮೀಪ ರೈಲು ಬೋಗಿ ತಪಾಸಣೆ ಮಾಡಿದಾಗ ಈ ಕಾಮದಾಟ ಬಹಿರಂಗಗೊಂಡಿತು. ಕೂಡಲೇ ನಾಲ್ವರನ್ನೂ ಬಂಧಿಸಿ ವಿಚಾರಣೆಗೆ ಮೈಸೂರಿನ ರೈಲ್ವೆ ಪೊಲೀಸ್ ಠಾಣೆಗೆ ಕರೆ ತಂದರು.
ಮೈಸೂರು ರೈಲು ನಿಲ್ದಾಣದಲ್ಲಿ ನಂದಿನಿ ಪಾರ್ಲರ್ ನಡೆಸುತ್ತಿರುವ ಸಂತೋಷ್ ಹಾಗೂ ಆತನ ಸ್ನೇಹಿತ ಅರುಣ್ ಎಂಬುವವರೇ ಪೊಲೀಸ ರ ಅತಿಥಿಗಳಾಗಿರುವ ಕಾಮಿಗಳು. ಈ ಇಬ್ಬರು ಇಂದು ಮೈಸೂರಿನಿಂದ ಚಾಮರಾಜನಗರಕ್ಕೆ ತೆರಳುವ ಎಕ್ಸ್ ಪ್ರೆಸ್ ರೈಲಿನಲ್ಲಿರುವ ವಿಐಪಿ ಬೋಗಿಯಲ್ಲಿ ಸೇರಿಕೊಂಡು ಕಾಮಕೇಳಿ ನಡೆಸುತ್ತಿದ್ದರು. ನಂಜನಗೂಡು ಬಳಿ ಪೊಲೀಸರು ದಾಳಿ ನಡೆಸಿದ ವೇಳೆ ಈ ನಾಲ್ವರು ನಗ್ನಾವಸ್ಥೆಯಲ್ಲಿಯೇ ಇದ್ದರು.
ಬಂಧಿತ ಯುವತಿಯರಿಬ್ಬರು ಕುಂಬಾರ ಕೊಪ್ಪಲು ನಿವಾಸಿಗಳಾಗಿದ್ದು, ಈ ಪೈಕಿ ಒಬ್ಬಳಿಗೆ ವಿವಾಹವಾಗಿದ್ದರೆ ಮತ್ತೊಬ್ಬಳು ಅವಿವಾಹಿತೆ. ಈ ಇಬ್ಬರು ಹಣಕ್ಕಾಗಿ ಇಂಥ ದಂಧೆಯಲ್ಲಿ ಭಾಗಿಗಳಾಗಿರಲಿಲ್ಲ. ಬದಲಿಗೆ ಇದೊಂದು ಅನೈತಿಕ ಸಂಬಂಧವಾಗಿದ್ದು ಕಳೆದ ಹಲವಾರು ದಿನಗಳಿಂದ ರೈಲ್ವೆ ಬೋಗಿಯಲ್ಲೇ ಇದನ್ನು ನಡೆಸುತ್ತಿದ್ದರು ಎಂಬುದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿದು ಬಂದಿದೆ.





1 Comment
sex kelsagalu kevala train bogiyalla.
kela mnc compny nadita ide.
kela md gale inta kelsa madtare.
modalu mnc compeny niga idbeku.