ಗರ್ಭನಿರೋಧಕ ಮಾತ್ರೆ ತೆಗೆದುಕೊಂಡರೂ ಮುಟ್ಟು ನಿಂತರೆ ಏನು ಮಾಡಲಿ ?

0
1096

 ಲೈಂಗಿಕ ತಜ್ಞರೊಂದಿಗೆ ಸಮಾಲೋಚನೆ

 

  1. ಪ್ರಶ್ನೆ: ನನಗೆ 55 ವರ್ಷ. ಪತ್ನಿಗೆ 52 ವರ್ಷ. ಕಳೆದ ದಶಕದಿಂದ ನಾವು ಲೈಂಗಿಕ ಕ್ರಿಯೆಗೆ ನಿರ್ಬಂಧ ವಿಧಿಸಿಕೊಂಡಿದ್ದೇವೆ. ಹಾಗಾಗಿ ಹಸ್ತಮೈಥುನದಿಂದ ತೃಪ್ತಿ ಹೊಂದಬೇಕಾಗಿದೆ. ಆದರೆ ನಾನು ಸಕ್ರಿಯ ಲೈಂಗಿಕ ಕ್ರಿಯೆಯತ್ತ ಆಸಕ್ತಿ ಹೊಂದಿದ್ದೇನೆ. ಆದರೆ ನನ್ನ ಪತ್ನಿ ಲೈಂಗಿಕ ಕ್ರಿಯೆ ನಿರ್ಭಂದ ಸಡಿಸಲು ಸಿದ್ಧವಿಲ್ಲ. ಅಕೆಯನ್ನು ಮನವರಿಕೆ ಮಾಡುವ ಬಗೆ ಹೇಗೆ ? ಕಳೆದ ಕೆಲವು ವರ್ಷಗಳಿಂದ ಪತ್ನಿಗೆ ನಾನಾ ಆರೋಗ್ಯ ಸಮಸ್ಯೆ ಇದೆ. ಇದರಿಂದ ನಮ್ಮ ಲೈಂಗಿಕ ಕ್ರಿಯೆಗೆ ತೊಂದರೆಯಾಗಲಿದೆಯೇ ?images

ವೈದ್ಯರ ಉತ್ತರ: ನಿಮ್ಮ ಪತ್ನಿಯಲ್ಲಿ ಮುಟ್ಟು ನಿಂತು ಹೋದ ಮೇಲೆ ಆಕೆ ಮತ್ತೇ ಗರ್ಭಿಣಿಯಾಗುವ ಸಾಧ್ಯತೆ ಇಲ್ಲ. ಹಾಗಾಗಿ ನೀವು ಮುಕ್ತ ಲೈಂಗಿಕ ಚಟುವಟಕೆಯಲ್ಲಿ ಭಾಗಿಯಾಗಬಹುದು.

ಪ್ರಶ್ನೆ 2. – ನನಗೆ 24 ವರ್ಷ. ನನ್ನ ಗರ್ಲ್ ಫ್ರೆಂಡ್ ಗೆ 23. ನಾವು ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ್ದೇವೆ. ಅಕೆಯ ಗುಪ್ತಾಂ ಗ ದೊಳಗೆ ವೀರ್ಯಾಣು ಸ್ಖಲನ ಮಾಡಿದ್ದೇನೆ. ಬಳಿಕ 8 ಗಂಟೆಗಳ ನಂತರ ಆಕೆ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡಿ ದ್ದಾಳೆ. ಅದರೂ ಆಕೆಗೆ ಈ ತಿಂಗಳು ಋತುಸ್ರಾವ ಆಗಿಲ್ಲ. ಆಕೆ ಗರ್ಭ ಧರಿಸುವ ಸಾಧ್ಯತೆ ಇದೆಯೇ ?

ವೈದ್ಯರ ಉತ್ತರ: ನಿಮ್ಮಾಕೆಯ ಮೂತ್ರ ಪರೀಕ್ಷೆ ನಡೆಸಿ. ಒಂದುವೇಳೆ ಪಾಸಿಟಿವ್ ಆದರೆ  ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ.

ಪ್ರಶ್ನೆ 3-ನನಗೆ 21 ವರ್ಷ. ನನಗೆ 3ರಿಂದ 5 ನಿಮಿಷದಲ್ಲಿ ವಿರ್ಯಾಣು ಸ್ಖಲನವಾಗುತ್ತದೆ. ಹಸ್ತಮೈಥುನ ಸಂದರ್ಭದಲ್ಲಿ ಸಾಮಾನ್ಯ ವಾಗಿ ಎಷ್ಟು ಅವಧಿಯಲ್ಲಿ ಸ್ಖಲನವಾಗಬೇಕು.?

ವೈದ್ಯರ ಉತ್ತರ: ಅದಕ್ಕೆ ನಿರ್ದಿಷ್ಟ ಸಮಯವೇನೂ ನಿಗದಿಯಾಗಿಲ್ಲ. ಅದು ನಿಮ್ಮ ವೇಗ ಮತ್ತು ಆವೇಶ-ಭಾವನೆಯನ್ನು ಅವಲಂಬಿಸಿದೆ.

ಪ್ರಶ್ನೆ 4-ನನ್ನ ಸಂಗಾತಿಯೊಂಡನೆ ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ್ದೇನೆ. ಆದರೆ ಈ ಸಂದರ್ಭದಲ್ಲಿ  ಕಾಂಡೋಮ್ ಜಾರಿಕೊಂಡಿದೆ. ಆಕೆಯ ಗುಪ್ತಾಂಗದೊಳಗೆ ವೀರ್ಯಾಣು ಸೇರಿಲ್ಲ. ಆದರೂ ಸುರಕ್ಷತೆ ದೃಷ್ಟಿಯಿಂದ ಗರ್ಭನಿರೋಧಕ ಮಾತ್ರೆ ತೆಗೆದುಕೊಂಡಿದ್ದಾಳೆ. ಆಕೆ ಏನಾದರೂ ಗರ್ಭಿಣಿಯಾಗುವ ಸಾಧ್ಯತೆ ಇದೆಯೇ ? ಲೈಂಗಿಕ ಕ್ರಿಯೆ ವೇಳೆ ಕಾಂಡೊಮ್ ಜಾರದಂತೆ ಖಚಿತಪಡಿಸಲು ಏನು ಮಾಡಬೇಕು. ?

ವೈದ್ಯರ ಉತ್ತರ: ನೀವು ಹೇಳುವ ಪ್ರಕಾರ ಆಕೆ ಗರ್ಭಿಣಿಯಾಗುವ ಸಾಧ್ಯವಿಲ್ಲ.  ಕಾಂಡೊಮ್ ಪ್ಯಾಕೇಜ್ ನಲ್ಲಿ ತಿಳಿಸಿರುವ ಸೂಚನೆಗಳನ್ನು ಸರಿಯಾಗಿ ಪಾಲಿಸಿ.

ಪ್ರಶ್ನೆ 5- ನನಗೆ 18 ವರ್ಷ. ಸ್ವಲ್ಹ ತೂಕ ಹೆಚ್ಚಾಗಿದ್ದೇನೆ. ನನ್ನ ಶಿಶ್ನ ಕೇವಲ ನಾಲ್ಕು ಇಂಚು ಉದ್ದವಿದೆ. ನಾನು ತಂದೆಯಾಗಲು ಯೋಗ್ಯನೇ ?

ವೈದ್ಯರ ಉತ್ತರ: ನಿಮ್ಮ ತೂಕವಾಗಲಿ, ನಿಮ್ಮ ಶಿಶ್ನದ ಗಾತ್ರವಾಗಲಿ ನೀವು ತಂದೆಯಾಗುವುದನ್ನು ನಿರ್ಧರಿಸುವುದಿಲ್ಲ. ಆದರೆ ನಿಮ್ಮ ಆರೊಗ್ಯದ ದೃಷ್ಟಿಯಿಂದ ತೂಕ ಕಡಿಮೆ ಮಾಡಿಕೊಳ್ಳಿ.