ನವದೆಹಲಿ/ಬೆಂಗಳೂರು:ಮಾ.20– ಕಾವೇರಿ, ಕೃಷ್ಣಾನದಿ ವಿವಾದಗಳಲ್ಲಿ ಕರ್ನಾಟಕದ ಪರ ಸುಪ್ರೀಂಕೋರ್ಟ್‍ನಲ್ಲಿ ವಕಾಲತ್ತು ವಹಿಸಿದ್ದ, ಖ್ಯಾತ ಹಿರಿಯ ವಕೀಲ ಹಾಗೂ ಸಂವಿಧಾನ ತಜ್ಞ ಅನಿಲ್ ಬಿ.ದಿವಾನ್ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

ದಿವಾನ್ ಅವರು ಅನೇಕ ಗಂಭೀರ ಕಾನೂನು ಪ್ರಕರಣಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. 1930, ಮೇ 15 ರಂದು ಜನಿಸಿದ ಅವರು, ಲಾ ಏಷ್ಯಾದ ಅಧ್ಯಕ್ಷರಾಗಿ, ಬಾರ್ ಅಸೋಸಿಯೇಷನ್ ಆಫ್ ಇಂಡಿಯಾದ ಸಹಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.

ಉನ್ನತ ಮಟ್ಟದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಕಸ್ತಿ(ಪಿಐಎಎಲ್) ಅರ್ಜಿಗಳ ಪರ ಸುಪ್ರೀಂಕೋರ್ಟ್‍ಗಳಲ್ಲಿ ಸಮರ್ಥ ವಾದ ಮಂಡಿಸಿದ್ದ ಅವರು, ಇಂಟರ್ ನ್ಯಾಷನಲ್ ಲಾ ಅಸೋಸಿಯೇಷನ್‍ನ ಜಲಸಂಪನ್ಮೂಲ ಕಾನೂನು ಕುರಿತ ಸಮತಿಯ ಸದಸ್ಯರೂ ಆಗಿದ್ದರು.

ಹಿರಿಯ ವಕೀಲ ಅನಿಲ್ ದಿವಾನ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಕಾವೇರಿ ಮತ್ತು ಕೃಷ್ಣ ಜಲ ವಿವಾದಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು ಎಂದು ಅವರನ್ನು ಸ್ಮರಿಸಿದ್ದಾರೆ.
Senior advocate and constitutional law expert, Anil B Divan, passed away